ಅಕ್ಕಿನೇನಿ ನಾಗಾರ್ಜುನ್​ ಕಿರಿಯ ಪುತ್ರನ ಚಿತ್ರದಲ್ಲಿ ಮಂಗಳೂರು ಬೆಡಗಿ...

collage (13)
Published on

ಹೈದರಾಬಾದ್: ಕನ್ನಡದಲ್ಲಿ ಮುಂಗಾರು ಮಳೆ 2 ಸಿನಿಮಾ ಮಾಡಿ, ಅದಾದ ಬಳಿಕ ತೆಲುಗಿನಲ್ಲಿಯೂ ಖಾತೆ ತೆರೆದ ಮಂಗಳೂರು ಬೆಡಗಿ ನೇಹಾ ಶೆಟ್ಟಿ, ಇದೀಗ ಬಹುದಿನಗಳ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ಅವರ ಕಿರಿಯ ಮಗ ಅಖಿಲ್​ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಈ ಸಿನಿಮಾ ಮುಗಿಸಿಕೊಂಡಿದ್ದು, ಹೀಗಿರುವಾಗಲೇ ಇದೇ ತಂಡಕ್ಕೆ ನೇಹಾ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ.

‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಚಿತ್ರದಲ್ಲಿ ನಿಖಿಲ್​​ಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೇನು ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇದೀಗ ನೇಹಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಪುರಿ ಜಗನ್ನಾಥ್​ ನಿರ್ದೇಶನದ ಮೆಹಬೂಬ ಸಿನಿಮಾ ಮೂಲಕ ಟಾಲಿವುಡ್​ ಪ್ರವೇಶಿಸಿದ್ದ ನೇಹಾ ಶೆಟ್ಟಿ, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಬೊಮ್ಮಿರಿಲು ಸಿನಿಮಾ ಖ್ಯಾತಿಯ ನಿರ್ದೇಶಕ ಭಾಸ್ಕರ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬನ್ನಿ ವಾಸ್, ವಾಸು ವರ್ಮಾ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net