

ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೇ ಸಿನಿಮಾ ದಿಲ್ ಬೇಚಾರಾ ಜು. 24ರಂದು ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ ಸ್ವತಃ ಸಿನಿಮಾ ಮಂದಿಯೇ ಚಿತ್ರದ ಬಗ್ಗೆ ತ್ತು ಸುಶಾಂತ್ ನಟನೆಯನ್ನು ಕೊಂಡಾಡುತ್ತಿದ್ದಾರೆ.
ಇದೀಗ ಇದೇ ದಿಲ್ ಬೇಚಾರಾ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದೇ ತಡ, IMDB (ಇಂಟರ್ನೆಟ್ ಮೂವಿ ಡೇಟಾಬೇಸ್) ತನ್ನ ಟಾಪ್ ಸಿನಿಮಾ ಪಟ್ಟಿಯಲ್ಲಿ ದಿಲ್ ಬೇಚಾರ ಚಿತ್ರಕ್ಕೆ ಮೊದಲ ಸ್ಥಾನ ನೀಡಿದೆ. 10 ಅಂಕಗಳಿಗೆ 9 ಅಂಕ ನೀಡಿ ಟಾಪ್ 10 ಸಿನಿಮಾ ಪಟ್ಟಿಯಲ್ಲಿ ದಿಲ್ ಬೇಚಾರಾ ಮೊದಲ ಸ್ಥಾನದಲ್ಲಿದೆ.
ಇನ್ನೊಂದು ಕುತುಹಲದ ವಿಚಾರ ಏನೆಂದರೆ, ಭಾರತೀಯ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ ಕಮಲ್ ಹಾಸನ್ ಅವರನ್ನು ಸುಶಾಂತ್ ಹಿಂದಿಕ್ಕಿದ್ದಾರೆ. 2003ರಲ್ಲಿ ಸುಂದರ್ ಸಿ ನಿರ್ದೇಶನದ, ಕಮಲ್ ಹಾಸನ್ ಮತ್ತು ಮಾಧವನ್ ನಟಿಸಿದ್ದ ಅನ್ಬೆ ಶಿವಮ್ ಸಿನಿಮಾ ಇಲ್ಲಿಯವರೆಗೂ 8.5 ಅಂಕಂಗಳೊಂದಿಗೆ ಟಾಪ್ನಲ್ಲಿತ್ತು. ಇದೀಗ ಆ ಚಿತ್ರವನ್ನು ದಿಲ್ ಬೇಚಾರ ಹಿಂದಿಕ್ಕಿದೆ.