ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ! ಆ ಇಬ್ಬರು ಕೊಲೆ ಮಾಡಿದ್ದು... 5 ವರ್ಷಗಳ ಬಳಿಕ ಸ್ಫೋಟಕ ಸಂಗತಿ ಬಿಚ್ಚಿಟ್ಟ ಸಹೋದರಿ | Sushant Singh Rajput

Untitled design
Published on

ಮುಂಬೈ: ಬಾಲಿವುಡ್​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿಗೀಡಾಗಿ ಐದು ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಅವರ ಅಕಾಲಿಕ ಸಾವು ಮಾತ್ರ ನಿಗೂಢವಾಗಿಯೇ ಉಳಿದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸುಶಾಂತ್​ ಅವರ ಶವ ಮುಂಬೈ ಫ್ಲ್ಯಾಟ್​ನಲ್ಲಿ ಪತ್ತೆಯಾಗಿತ್ತು. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ವಾದ ಇಂದಿಗೂ ಜೀವಂತವಾಗಿದೆ. ಬಹುತೇಕ ಆರೋಪಗಳು, ಊಹಾಪೋಹಗಳು ಇದೊಂದು ಹತ್ಯೆ ಎಂಬುದನ್ನು ಒತ್ತಿ ಹೇಳುತ್ತಿದೆಯೇ ವಿನಃ ಎಲ್ಲಿಯೂ ಇದಕ್ಕೆ ಪೂರಕವಾದ ಅಥವಾ ಸಾಬೀತುಪಡಿಸುವಂತ ಸಾಕ್ಷಿ ಲಭಿಸುತ್ತಿಲ್ಲ ಎಂಬ ಸಂಗತಿ ಸದ್ಯ ನಟನ ಅಭಿಮಾನಿ ಬಳಗಕ್ಕೆ ತೀವ್ರ ಬೇಸರ ಮೂಡಿಸಿದೆ.

ಸುಶಾಂತ್ ಸಿಂಗ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಇದೀಗ ಮತ್ತೊಮ್ಮೆ ತಮ್ಮ ಸಹೋದರನ ಬಗ್ಗೆ ಸಾವಿನ ಕುರಿತು ಧ್ವನಿ ಎತ್ತಿದ್ದಾರೆ. ಈ ಬಾರಿ ಬಹಳ ನಿಖರವಾಗಿ ಇದೊಂದು ಆತ್ಮಹತ್ಯೆ ಪ್ರಕರಣವಲ್ಲ! ಬದಲಿಗೆ ಅಣ್ಣನನ್ನು ಇಬ್ಬರು ಸಂಚು ಹೂಡಿ ಕೊಲೆಗೈದಿದ್ದಾರೆ ಎಂದು ಗಂಭೀರ ಆರೋಪ ಎಸಗಿದ್ದಾರೆ. ಇಂದಿಗೂ ನಿಗೂಢವಾಗಿಯೇ ಉಳಿದಿರುವ ಸುಶಾಂತ್ ಸಾವಿನ ಕೇಸ್​ ಕುರಿತು ಇತ್ತೀಚೆಗೆ ಪತ್ರಕರ್ತ ಶುಭಂಕರ್ ಮಿಶ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಶ್ವೇತಾ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಫ್ಯಾನ್​ಗೆ ನೇಣುಹಾಕಿಕೊಳ್ಳಲು ಸಾಧ್ಯವೇ ಇಲ್ಲ!

"ಅಣ್ಣನ ಸಾವು ಆತ್ಮಹತ್ಯೆ ಎಂದು ನಾನು ಒಪ್ಪುವುದಿಲ್ಲ. ಕಾರಣ, ಅವನು ಸತ್ತು ಬಿದ್ದಿದ್ದ ರೂಮ್​ನಲ್ಲಿ ಹಾಸಿಗೆ ಮತ್ತು ಸೀಲಿಂಗ್ ಫ್ಯಾನ್​ಗೆ ಹೆಚ್ಚಿನ ಅಂತರವೇ ಇಲ್ಲ. ಆತನ ಕುತ್ತಿಗೆಯಲ್ಲಿ ಮೇಲೆ ಬಿದ್ದಿದ್ದ ಗುರುತುಗಳು ಬಟ್ಟೆಯಿಂದ ಬಿಗಿದುಕೊಂಡಂತಿಲ್ಲ. ಸರಪಳಿಯಿಂದ ಅಂತ ನನಗೆ ಅನಿಸುತ್ತೆ. ಅದು ಹೇಗೆ ಸುಸೈಡ್​ ಎಂದೇಳಲು ಆಗುತ್ತೆ? ಮುಖ್ಯವಾಗಿ ಕೊಠಡಿಯಲ್ಲಿ ಎಲ್ಲಿಯೂ ಸ್ಟೂಲ್​ ಕೂಡ ಪತ್ತೆಯಾಗಿಲ್ಲ" ಎಂದು ಶಾಕಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇಬ್ಬರಿಂದ ಒಂದೇ ರೀತಿಯ ಮಾತು!

"ಈ ಘಟನೆಯಿಂದ ತೀರ ನೊಂದಿದ್ದ ನನಗೆ ಇಬ್ಬರೂ ಮಾಂತ್ರಿಕರು ಒಂದೇ ರೀತಿಯ ವಿಚಾರವನ್ನು ಹೇಳಿದರು. ಒಬ್ಬರು ಮುಂಬೈನವರಾದರೆ, ಮತ್ತೊಬ್ಬರು ಅಮೆರಿಕ ಮೂಲದವರು. ಅವರಿಬ್ಬರಿಗೂ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಗೊತ್ತಿಲ್ಲ. ಆದರೆ, ಇವರಿಬ್ಬರು ಸುಶಾಂತ್ ಸಿಂಗ್​ ಸಾವು ಆತ್ಮಹತ್ಯೆಯಲ್ಲ. ಅದೊಂದು ಕೊಲೆ ಎಂದರು. ಇದೆಲ್ಲಕ್ಕಿಂತ ಮುಖ್ಯವಾಗಿ ಅಣ್ಣನನ್ನು ಇಬ್ಬರು ಕೊಲೆಗೈದಿದ್ದಾರೆ ಎಂಬ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದರು. ಅಸಲಿಗೆ ಇದು ಸುಳ್ಳು ಎಂದೇ ಹೇಳಬಹುದು. ಆದರೆ, ಅದ್ಹೇಗೆ ಇಬ್ಬರೂ ಒಂದೇ ರೀತಿ ಹೇಳಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net