ಮದುವೆ ಆದರೂ ಈ ಕಾಟ ತಪ್ಪಿರಲಿಲ್ಲ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಾಟ್​ ಬ್ಯೂಟಿ | Casting Couch

ವಿಜಯವಾಣಿ - 2025-05-30T174317.976
Published on

Casting Couch: ಚಿತ್ರರಂಗದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕೆಲವರು ಪ್ರತಿಭೆಯ ಮೂಲಕ ಎಂಟ್ರಿಕೊಟ್ಟರೆ, ಇನ್ನೂ ಕೆಲವರು ಮಂಚ ಏರಿದ ಬಳಿಕವೇ ಅವಕಾಶ ಪಡೆಯುತ್ತಾರೆ. ಅಂಥಾ ಕೆಟ್ಟ ಸ್ಥಿತಿ ಇಂದಿಗೂ ಚಿತ್ರರಂಗಗಳಲ್ಲಿ ಇವೆ. ಇದಕ್ಕೆ ಹತ್ತು ಹಲವು ಘಟನೆಗಳೇ ಜ್ವಲಂತ ಸಾಕ್ಷಿ. ಈ ಕುರಿತಂತೆ ಈಗಾಗಲೇ ಹಲವು ಚಿತ್ರೋದ್ಯಮದ ಹಲವಾರು ನಟಿಮಣಿಯರು ತಮಗಾದ ಕೆಟ್ಟ ಅನುಭವಗಳನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ. ಅವರ ಸಾಲಿಗೆ ಇದೀಗ ಬಾಲಿವುಡ್​ ನಟಿ ಸುರ್ವೀನ್ ಚಾವ್ಲಾ ಕೂಡ ಸೇರ್ಪಡೆಗೊಂಡಿದ್ದಾರೆ.

ಮುತ್ತಿಕ್ಕಲು ಮೈಮೇಲೆ ಬಿದ್ದರು

'ಕಾಸ್ಟಿಂಗ್ ಕೌಚ್' ಕುರಿತು 'ದಿ ಮೇಲ್ ಫೆಮಿನಿಸ್ಟ್' ಪಾಡ್‌ಕ್ಯಾಸ್ಟ್‌ನಲ್ಲಿ ಮೌನ ಮುರಿದ ಬಾಲಿವುಡ್​ ನಟಿ ಸುರ್ವೀನ್ ಚಾವ್ಲಾ, "ಕೆಲವು ನಟಿಯರಂತೆ ನನಗೂ ಈ ಕೆಟ್ಟ ಅನುಭವ ಆಗಿದೆ. ಮದುವೆಯಾದ ಬಳಿಕವೂ ನನಗೆ ಕಾಟ ತಪ್ಪಿರಲಿಲ್ಲ. ಆಗ ಮುಂಬೈ ಕಚೇರಿಯಲ್ಲಿ ನಿರ್ದೇಶಕರನ್ನು ಭೇಟಿಯಾಗಲು ಹೋಗಿದ್ದೆ. ಈ ಸಂದರ್ಭದಲ್ಲಿ ನಾನು ಆಗ ತಾನೇ ಮದುವೆಯಾಗಿದ್ದೆ ಎಂಬ ಮಾಹಿತಿ ಅವರಿಗಿತ್ತು. ಆದರೂ ಮಾತುಕತೆ ನೆಪದಲ್ಲಿ ನನಗೆ ಮುತ್ತಿಕ್ಕಲು ಮೈಮೇಲೆ ಬಿದ್ದರು. ತಕ್ಷಣವೇ ಅಲ್ಲಿಂದ ಎದ್ದು ಹೊರಬಂದೆ" ಎಂದರು.

ಮತ್ತೊಂದು ಪ್ರತ್ಯೇಕ ಘಟನೆ ನೆನೆಪಿಸಿಕೊಂಡ ಸುರ್ವೀನ್​, "ದಕ್ಷಿಣದ ಭಾರತದ ನಿರ್ದೇಶಕರೊಬ್ಬರು ನಮ್ಮಿಬ್ಬರಿಗೂ ಪರಸ್ಪರ ಪರಿಚಯಸ್ಥ ವ್ಯಕ್ತಿಯ ಮೂಲಕ ನನ್ನನ್ನು ಶೂಟಿಂಗ್​ ಸಮಯದಲ್ಲಿ ಅವರೊಂದಿಗೆ ಮಲಗುವಂತೆ ಬಯಸಿದ್ದರು. ಇದಕ್ಕೆ ನಾನು ಧಿಕ್ಕರಿಸಿದ್ದೆ. ಈ ಎರಡು ಪ್ರತ್ಯೇಕ ಘಟನೆಗಳನ್ನು ಹೇಳಿದ್ದೀನಿ ಅಷ್ಟೇ. ಇಂತಹ ಅನೇಕ ಕಹಿ ಘಟನೆಗಳು ನನಗೆ ಅನುಭವವಾಗಿದೆ" ಎಂದು ಹೇಳಿದರು.

ನಿನಗೆ ದೊಡ್ಡ ಸ್ತನವಿಲ್ಲ

"ದೇಹ ತೂಕ ಹೆಚ್ಚಿಸಿಕೊಳ್ಳಲು ಕುರಿತು ಮಾತನಾಡಿದ ನಟಿ, "ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ನಿಮ್ಮ ದೇಹ ತೂಕ ಹೆಚ್ಚಿರಬೇಕು. ತುಂಬ ಮಂದಿ, ನೀನು ತುಂಬಾ ತೆಳ್ಳಗೆ, ಸಣ್ಣ ಇದ್ದೀಯಾ ಎಂದು ಟೀಕಿಸಿದ್ದರು. ನಿನಗೆ ದೊಡ್ಡ ಸ್ತನಗಳಿಲ್ಲ. ಯಾವುದೂ ಕುಣಿಯುವುದಿಲ್ಲ, ಬೌನ್ಸ್ ಆಗುವುದಿಲ್ಲ ಎಂದಿದ್ದರು. ಅಂದು ಅವರ ಮಾತಿಗೆ ಮುಖಕ್ಕೆ ಹೊಡೆದಂತೆ ಮಾತನಾಡಿದ್ದೆ. ಇಂದು ಸಹ ಖಡಕ್​ ಉತ್ತರವನ್ನೇ ಕೊಟ್ಟಿದ್ದೇನೆ" ಎಂದು ಖಡಕ್ ಆಗಿ ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net