

Ayushman Card: ಹಿರಿಯ ನಾಗರಿಕರಿಗೆ ಇದು ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರದ ಮಹತ್ವ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ (ಆಯುಷ್ಮಾನ್ ಕಾರ್ಡ್) 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಜನ ಆರೋಗ್ಯ ಯೋಜನೆ (AB PM-JAY) ಅಡಿಯಲ್ಲಿ ವಿಶೇಷ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಈ ಯೋಜನೆ ಅನೇಕರಿಗೆ ಲಾಭದಾಯಕವಾಗಿದೆ.
ವೃದ್ಧರು ಆಯುಷ್ಮಾನ್ ವೆ ವಂದನ ಕಾರ್ಡ್ ಮೂಲಕ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು. ಈ ಆಯುಷ್ಮಾನ್ ಕಾರ್ಡ್ ಪಡೆಯಲು ಯಾವ ದಾಖಲಾತಿಗಳು ಬೇಕು? ಅರ್ಹತೆಗಳೇನು? ಏನ್ನೆಲ್ಲ ಪ್ರಯೋಜನ? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ನೀವು 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ನೀವು ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ವ್ಯಾಪ್ತಿಗೆ ಒಳಪಡುತ್ತೀರಿ. ಈ ಯೋಜನೆಯ ಫಲಾನುಭವಿ ನೀವಾದರೆ ನಿಮ್ಮ ಜೇಬಿನಿಂದ ಒಂದು ರೂಪಾಯಿ ಖರ್ಚು ಮಾಡದೆ ಉಚಿತವಾಗಿ ಸರ್ಕಾರಿ ಅಥವಾ ಎಂಪನೇಲ್ಡ್ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಯೋಜನೆಯು ಔಷಧಿಗಳು, ವೈದ್ಯಕೀಯ ಪರೀಕ್ಷೆಗಳು, ಐಸಿಯು, ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 27 ವಿಶೇಷತೆಗಳು ಮತ್ತು 1,961 ವೈದ್ಯಕೀಯ ವಿಧಾನಗಳನ್ನು ಪೂರೈಕೆ ಮಾಡುತ್ತದೆ. ಇದು ವ್ಯಕ್ತಿಗಳ ಆದಾಯಕ್ಕೆ ಸಂಬಂಧಿಸುವುದಿಲ್ಲ. ನಿವೃತ್ತಿ ಹೊಂದಿದವರು, ಕರ್ತವ್ಯದಲ್ಲಿ ಇರುವವರು ಮತ್ತು ಆದಾಯ ಇಲ್ಲದವರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು.
70 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಕಾರ್ಡ್‌ಗೆ ಅರ್ಹರು. ಇಲ್ಲಿ ಯಾವುದೇ ಆದಾಯದ ಅವಶ್ಯಕತೆಯಿಲ್ಲ. ಇದು ವಿಶೇಷವಾಗಿ ವೃದ್ಧರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಲ್ಲಿ ಚಾಲ್ತಿಗೆ ತಂದಿರುವ ಆರೋಗ್ಯ ಯೋಜನೆ ಇದಾಗಿದೆ.