Teacher and Student: ವಿದ್ಯಾರ್ಥಿಗಳ ಮಧ್ಯೆ ಜಗಳ: ಕ್ಲಾಸ್​ರೂಮ್​ಗೆ ಓಡಿ ಬಂದ ಶಿಕ್ಷಕಿಗೆ ಕಾದಿತ್ತು ಸರ್ಪ್ರೈಸ್​!

Teacher
Published on

ನವದೆಹಲಿ: ವಿದ್ಯಾರ್ಥಿಗಳು (Students) ಮತ್ತು ಶಿಕ್ಷಕರ (Teachers) ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ತಮ್ಮ ಬೋಧನೆಯಿಂದ ವಿದ್ಯಾರ್ಥಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಾರೆ. ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿ ಹೇಳಿ, ಸರಿದಾರಿಯಲ್ಲಿ ನಡೆಸುತ್ತಾರೆ. ಹೀಗಾಗಿಯೇ ವಿದ್ಯಾರ್ಥಿಗಳು ಸಹ ಇಂತಹ ಶಿಕ್ಷಕರ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಭಿನ್ನ ವಿಡಿಯೋಗಳು ಶೇರ್ ಆಗುತ್ತಿವೆ. ಇದರಲ್ಲೂ ಸಾಕಷ್ಟು ಶಾಲಾ-ಕಾಲೇಜುಗಳ ವಿಡಿಯೋಗಳು ಶೇರ್ ಆಗುತ್ತಿವೆ. ಇದೀಗ ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಅಚ್ಚರಿಗೊಳಿಸುವಂತೆ ನಟಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋ ಆರಂಭದಲ್ಲಿ ಶಿಕ್ಷಕಿ ತರಗತಿಯ ಒಳಗೆ ಓಡಿ ಬರುತ್ತಾರೆ. ಕ್ಲಾಸ್​ರೂಮ್​ ಒಳಗಡೆ ನುಗ್ಗುತ್ತಿದ್ದಂತೆ ವಿದ್ಯಾರ್ಥಿಗಳು ಕಾನ್ಫೆಟ್ಟಿಯನ್ನು ಸ್ಫೋಟಿಸುತ್ತಾರೆ. ಬಳಿಕ ಹೂಗುಚ್ಛಗಳನ್ನು ನೀಡಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸುತ್ತಾರೆ. ಮಕ್ಕಳ ಸರ್ಪ್ರೈಸ್​ ನೋಡಿ ಶಿಕ್ಷಕಿ ಸಹ ತುಂಬಾ ಖುಷಿಯಾಗುತ್ತಾರೆ.

ಆರಂಭದಲ್ಲಿ ಶಿಕ್ಷಕಿ ವಿದ್ಯಾರ್ಥಿಗಳು ಜಗಳವಾಡುತ್ತಿದ್ದಾರೆ ಎಂದು ಭಾವಿಸಿದ್ದರು. ಏನಾದರೂ ಆಗಿಬಿಡುತ್ತದೆ ಎಂಬ ಭಯದಲ್ಲಿ ಕ್ಲಾಸ್​ರೂಮ್​ ಒಳಗೆ ಓಡಿ ಬಂದಾಗ ವಿದ್ಯಾರ್ಥಿಗಳು ಈ ಸರ್ಪ್ರೈಸ್​ ನೀಡಿದ್ದಾರೆ. ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಈ ಸರ್ಪ್ರೈಸ್​ ನೀಡಿದ್ದಾರೆ ಎನ್ನಲಾಗಿದೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಆಕರ್ಷಿಸಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂದವ್ಯ ಈ ರೀತಿ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net