ಸುರೇಶ್ ರೈನಾ ಕೂಡ ವಿದಾಯ

Suresh-Raina-retires
Published on

ಮುಂಬೈ: ಎಂಎಸ್ ಧೋನಿಯ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ಸುರೇಶ್ ರೈನಾ ಕೂಡ ನೆಚ್ಚಿನ ನಾಯಕ ವಿದಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಧೋನಿ ಜತೆಗೂಡಿ ಚೆನ್ನೈನಲ್ಲಿ ಐಪಿಎಲ್ ಸಿದ್ಧತೆ ಆಗಮಿಸಿದ್ದ ರೈನಾ, ದಿಢೀರ್ ವಿದಾಯ ಹೇಳಿದ್ದಾರೆ.

33 ವರ್ಷದ ಸುರೇಶ್ ರೈನಾ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಲರಾಗಿದ್ದರು. ಧೋನಿ ಸಾರಥ್ಯದ ಸಿಎಸ್‌ಕೆ ತಂಡದ ಪ್ರಮುಖ ಆಟಗಾರನಾಗಿರುವ ರೈನಾ, ನಾನು ನಿಮ್ಮ ಜತೆಯಲ್ಲೇ ಸಾಗಲು ಇಷ್ಟಪಡುವೆ ಧೋನಿ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಜತೆಗೆ ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್‌ಕೆ ತಂಡದಲ್ಲಿದ್ದಾರೆ.

2013ರ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಸಿಎಸ್‌ಕೆ ಎರಡು ವರ್ಷ ನಿಷೇಧದಲ್ಲಿದ್ದಾಗ ರೈನಾ ಗುಜರಾತ್ ತಂಡದಲ್ಲಿದ್ದರೆ, ಧೋನಿ ಪುಣೆ ತಂಡದ ಪರ ಆಡಿದ್ದರು. ಉತ್ತರ ಪ್ರದೇಶದ ಸುರೇಶ್ ರೈನಾ, 18 ಟೆಸ್ಟ್ ಪಂದ್ಯಗಳಿಂದ 768 ರನ್ ಕಲೆಹಾಕಿದ್ದರೆ, 226 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 5615ರನ್, 78 ಟಿ20 ಪಂದ್ಯಗಳಿಂದ 1 ಶತಕ, 5 ಅರ್ಧಶತಕ 1605 ರನ್ ಬಾರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net