ಸುರಗಿರಿ ಸಂಸ್ಕಾರ ಶಿಬಿರ ಸಮಾರೋಪ

New Project (32)
Published on

ಕಿನ್ನಿಗೋಳಿ: ಬ್ರಾಹ್ಮಣ ಸಮಾಜ ಟ್ರಸ್ಟ್ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಭಾಗಿತ್ವದಲ್ಲಿ 15 ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ವಿದ್ವಾನ್ ಅಂಗಡಿಮಾರ್ ವಿಶ್ವೇಶ ಭಟ್ ಆಶೀರ್ವಚನಗೈದರು. ಶಿಬಿರಾರ್ಥಿಗಳಾದ ಮನಿರತ್ನ, ಆರಾಧ್ಯ, ಸಾರ್ವಣಿ, ಕಾರ್ತಿಕ್ ಶಿಬಿರದಲ್ಲಿ ಕಲಿತ ಹಾಡು, ಭಜನೆ, ವಿಷ್ಣು ಸಹಸ್ರ ನಾಮವನ್ನು ಪ್ರಸ್ತುತಪಡಿಸಿದರು.

ಗುರು ರವೀಂದ್ರ ಭಟ್ ಅತ್ತೂರು ಮಾತನಾಡಿ, ನಮ್ಮ ಭಾರತ ದೇಶ ಪ್ರತಿನೂರು ಕಿಲೋಮೀಟರ್‌ಗಳಿಗೆ ಪ್ರಕೃತಿ ಮತ್ತು ಸಂಸ್ಕಾರ ಬದಲಾಗುತ್ತದೆ, ಇದೇ ನಮ್ಮ ವೈಶಿಷ್ಟೃ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಪಾರ್ಥಸಾರಥಿ ಪಂಜ, ಧಾರ್ಮಿಕ ದತ್ತಿ ಇಲಾಖೆ ದಕ್ಷಿಣ ಕನ್ನಡದ ಸದಸ್ಯ ಕೊರಿಯರ್ ಸುಬ್ರಹ್ಮಣ್ಯ ಪ್ರಸಾದ್, ಜ್ಯೋತಿಷಿ ವಿಶ್ವನಾಥ್ ಭಟ್, ಕೋಡು ಶ್ರೀನಿವಾಸ್ ಭಟ್, ದೇವಿಕಾ ರಾವ್ ಪಡುಬಿದ್ರಿ, ರಘುರಾಮ್ ಭಟ್, ಸುರಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರವಿಂದ ಭಟ್ ಕುದುಕೊಳ್ಳಿ, ಡಾ.ಗುರುರಾಜ ಉಡುಪ ಕಿಲೆಂಜೂರು, ಸುರೇಶ್ ರಾಜ್ ಭಟ್ ಕೋಡು, ಭರತ್ ರಾವ್ ಪಕ್ಷಿಕೆರೆ, ಸುಧೀಂದ್ರ ಉಡುಪ ಮಾಡ, ಸುಧೀಂದ್ರ ಉಡುಪ ಬೈಲು ಮತ್ತಿತರರಿದ್ದರು. ವೈಭವ್ ಭಟ್ ಉರ್ಮಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net