Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

suprime court
Published on

ನವದೆಹಲಿ: ಜೈಲುಗಳಲ್ಲಿನ ಕೈಪಿಡಿಗಳಲ್ಲಿನ ಜಾತಿ ಅಂಕಣವನ್ನು ತೆಗೆದುಹಾಕುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸುಪ್ರೀಂ ಕೋರ್ಟ್(Supreme Court) ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್(Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ. ಕೈದಿಗಳ ವಿರುದ್ಧ ತಾರತಮ್ಯಕ್ಕೆ ಜಾತಿ ಕಾರಣವಾಗಬಾರದು. ಅಂತಹ ವಿಷಯಗಳನ್ನು ಅನುಮತಿಸಲಾಗುವುದಿಲ್ಲ ಎಂದು ಅದು ಪೀಠ ಹೇಳಿದೆ.

ಕೆಲಸದ ವಿಚಾರದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಬೇಕು. ಅಪಾಯಕಾರಿಯಾದ ಕೊಳಚೆ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈದಿಗಳಿಗೆ ಅವಕಾಶ ನೀಡಬಾರದು. ಒಂದು ಜಾತಿಯವರನ್ನು ಕಸಗುಡಿಸುವವರನ್ನಾಗಿ ಆಯ್ಕೆ ಮಾಡುವುದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ.

ಕೆಳ ಜಾತಿಯ ಕೈದಿಗಳಿಗೆ ಶೌಚಗೃಹ ಸ್ವಚ್ಛತೆ, ಕಸ ಗುಡಿಸುವುದು, ಮೇಲ್ಜಾತಿಯವರು ಅಡುಗೆ ಕೆಲಸಗಳನ್ನು ಹಂಚುವುದು ಸೇರಿದಂತೆ ಜೈಲೊಳಗಿನ ಕೆಲಸಗಳು ತಾರತಮ್ಯದಿಂದ ಕೂಡಿವೆ ಎಂದು ಪೀಠ ಸ್ಪಷ್ಟಪಡಿಸಿದೆ.

ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಪ್ರತ್ಯೇಕತೆ ಪಾಲಿಸುತ್ತಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯ ಕುರಿತು ನ್ಯಾಯಾಲಯವು ಗುರುವಾರ ಮಹತ್ವದ ತೀರ್ಪು ನೀಡಿದೆ. ಇಂತಹ ಕೃತ್ಯಗಳು ಅಸ್ಪೃಶ್ಯತೆ ಅಡಿಯಲ್ಲಿ ಬರುತ್ತವೆ. ಕೈದಿಗಳನ್ನು ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸುವುದು ಬದಲಾವಣೆಯನ್ನು ತರುವುದಿಲ್ಲ ಮತ್ತು ಅವರ ಆತ್ಮಗೌರವವನ್ನು ಉಲ್ಲಂಘಿಸುವುದು ವಸಾಹತುಶಾಹಿಯ ಸಂಕೇತವಾಗಿದೆ ಎಂದು ಅದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇದು ಆರ್ಟಿಕಲ್ 15 ರ ಉಲ್ಲಂಘನೆ: Supreme Court

ಕೆಲವು ರಾಜ್ಯಗಳಲ್ಲಿ ಕೈದಿಗಳಿಗೆ ಜಾತಿ ಆಧಾರದಲ್ಲಿ ಕೆಲಸ ನೀಡಲಾಗಿದೆ. ಕಾರಾಗೃಹದಲ್ಲಿ ಕೊಠಡಿ ಹಂಚಿಕೆಗೆ ಸಂಬಂಧಿಸಿದ ನಿಯಮಗಳು ಸರಿಯಾಗಿಲ್ಲ. ಪರಿಶಿಷ್ಟ ಜಾತಿಯ ಕೈದಿಗಳಿಗೆ ಮಾತ್ರ ಸ್ವಚ್ಛತಾ ಕೆಲಸ, ಅಡುಗೆ ಕೆಲಸ ಮೇಲ್ಜಾತಿ ಕೈದಿಗಳಿಗೆ ನೀಡಿರುವುದು ಆಘಾತಕಾರಿ. ಇದು ಕಲಂ 15ರ ಉಲ್ಲಂಘನೆಯಾಗಿದೆ. ತಿಂಗಳೊಳಗೆ ಇದನ್ನು ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net