ಮುಂಬೈ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ(Stock Market) ಮೇಲೆ ಬಿದ್ದಿದೆ. ಗುರುವಾರ(ಅ.3)ರ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡಿದೆ. ಸೆನ್ಸೆಕ್ಸ್ 1300 ಮತ್ತು ನಿಫ್ಟಿ 400 ಅಂಕಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಆದರೆ, ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಷೇರುಗಳು ಮಾತ್ರ ಗಗನಕ್ಕೇರುತ್ತಿವೆ.
ಇದನ್ನೂ ಓದಿ: ‘ದೇವರ’ ಆರಂಭದಲ್ಲಿ ಅಬ್ಬರ! ಆರನೇ ದಿನಕ್ಕೆ ಮುಗ್ಗರಿಸಿತೇ? ಬಾಕ್ಸ್ ಆಫೀಸ್ನಲ್ಲಿ ಏನಾಯ್ತು? | Devara
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ(Stock Market) ಸೂಚ್ಯಂಕ ನಿಫ್ಟಿ ಗುರುವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ. ಸೆನ್ಸೆಕ್ಸ್ 1,300 ಅಂಕಗಳಿಗಿಂತ ಕಡಿಮೆಯಾಗಿ ಪ್ರಸ್ತುತ 82,800 ಅಂಕಗಳ ಮೇಲೆ ಸುಳಿದಾಡುತ್ತಿದೆ. ಇನ್ನೊಂದೆಡೆ ನಿಫ್ಟಿ 400 ಅಂಕ ಕುಸಿದು 25 ಸಾವಿರದ 350 ಅಂಕಗಳ ಮಟ್ಟದಲ್ಲಿ ಸಾಗುತ್ತಿದೆ.
ರಿಲಯನ್ಸ್ ಗಗನಮುಖಿ: Stock Market
ಆದರೆ ಒಂದು ಕಡೆ ಮಾರುಕಟ್ಟೆಗಳು ಕುಸಿಯುತ್ತಿದ್ದರೂ, ಮತ್ತೊಂದು ಕಡ ದೈತ್ಯ ಸಮೂಹದ ಷೇರುಗಳು ಗಗನಕ್ಕೇರುತ್ತಿವೆ. ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ನ ಅಂಗಸಂಸ್ಥೆಯಾದ ರಿಲಯನ್ಸ್ ಪವರ್ ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್‌ನಲ್ಲಿದೆ. ರಿಲಯನ್ಸ್ ಪರ ಪಾಸಿಟಿವ್ ಅನೌನ್ಸ್ ಮೆಂಟ್ ಗಳು ಷೇರುಗಳು ಅಪ್ಪರ್ ಸರ್ಕ್ಯೂಟ್ ನಲ್ಲಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪ್ರತಿದಿನ ಹೊಸ ಸಾರ್ವಕಾಲಿಕ ಗರಿಷ್ಠವನ್ನು ದಾಖಲಿಸುತ್ತಿವೆ. ಕಳೆದ 15 ದಿನಗಳ ಅವಧಿಯಲ್ಲಿ ಈ ಪಾಲು ಶೇ.81ರಷ್ಟು ಹೆಚ್ಚಿದೆ. ಈ ವರ್ಷ ಇಲ್ಲಿಯವರೆಗೆ ಶೇ.124 ರಷ್ಟು ಷೇರು ಏರಿಕೆಯಾಗಿದೆ ಎಂದು ವರದಿಯಾಗಿದೆ.
Womens T-20 World Cup: ಯುಎಇಯಲ್ಲಿ ಇಂದಿನಿಂದ ಪ್ರಾರಂಭ..ಕಪ್ ಗೆಲ್ಲುವ ಫೆವರೀಟ್ ತಂಡ ಯಾವುದು ಗೊತ್ತಾ?