ನಂಬಿ ನಾರಾಯಣನ್ ಗೂಢಚರ್ಯೆ ಪ್ರಕರಣ: ಸಿಬಿಐ ತನಿಖೆ ಮುಂದುವರೆಸಲು ಸುಪ್ರೀಂ ಆದೇಶ

blank

ನವದೆಹಲಿ: ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಸಂಬಂಧಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ಕಮಿಟಿ ನೀಡಿದ್ದ ವರದಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್​, ಸಿಬಿಐ ತನಿಖೆ ಮುಂದುವರೆಸಲು ಗುರುವಾರ ಆದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡಲು ನ್ಯಾ ಡಿಕೆ ಜೈನ್ ನೇತೃತ್ವದ ತ್ರಿ ಸದಸ್ಯ ಸಮಿತಿಯನ್ನು ಸುಪ್ರೀಂಕೋರ್ಟ್​ 2018 ರಲ್ಲಿ ರಚಿಸಿತ್ತು. 2020 ರಲ್ಲಿ ಸಮಿತಿ ವರದಿ ನೀಡಿತ್ತು. ಈ ವರದಿಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​​ಗೆ ಮನವಿ ಮಾಡಿತ್ತು.

ಕೇಂದ್ರ ಸರ್ಕಾರದ ಮನವಿ ಪರಿಗಣಿಸಿರುವ ಉನ್ನತ ನ್ಯಾಯಾಲಯ, ವರದಿಯಲ್ಲಿನ ಅಂಶಗಳು ಯಾವುದೇ ಕಕ್ಷಿದಾರರಿಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಮೂರು ತಿಂಗಳ ಒಳಗೆ ಸಿಬಿಐ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಸಿಬಿಐಗೆ ನಿರ್ದೇಶಿಸಿದೆ. ನ್ಯಾಯಮೂರ್ತಿ ಎ.ಎಂ.ಖಾನವೀಲಕರ್ ಅವರು ಈ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಯಾರಿಗೆ ವಯಸ್ಸಾಗಿರತ್ತೋ ಅವ್ರು ಸಾಯ್ಲೇಬೇಕಲ್ಲಾ? ಕರೊನಾದಿಂದ ಸತ್ರೆ ಏನ್​ ಮಾಡೋಕಾಗತ್ತೆ ಎಂದ ಸಚಿವ

ಕ್ರಯೋಜನಿಕ್ ರಾಕೆಟ್ ಇಂಜಿನ್ ಅಭಿವೃದ್ಧಿಯ ಸಂಗತಿಗಳನ್ನು ಪಾಕಿಸ್ತಾನದೊಂದಿಗೆ ಭಾರೀ ಮೊತ್ತಕ್ಕೆ ಮಾರಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಇಸ್ರೋದ ಅಂದಿನ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ಹಾಗೂ ಇತರ ನಾಲ್ವರ ಮೇಲೆ 1994 ರಲ್ಲಿ ಹೊರಿಸಲಾಗಿತ್ತು. ಕೇರಳ ಸರ್ಕಾರದ ಗುಪ್ತಚರದಳದ ಅಧಿಕಾರಿಗಳು ನಂಬಿ ನಾರಾಯಣನ್ ಅವರನ್ನು ಬಂಧಿಸಿ, 50 ದಿನ ಜೈಲಿನಲ್ಲಿಟ್ಟು ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿತ್ತು. ಈ ಪ್ರಕರಣದಲ್ಲಿ ಕೇರಳ ಪೊಲೀಸರು ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ 1996 ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ತನಿಖೆ ಆಧರಿಸಿ 2018 ರಲ್ಲಿ ಸುಪ್ರೀಂಕೋರ್ಟ್​, ನಂಬಿ ನಾರಾಯಣನ್ ಪ್ರಕಣದ ಬಗ್ಗೆ ಡಿಕೆ ಜೈನ್ ನೇತೃತ್ವದ ತ್ರಿ ಸದಸ್ಯ ಸಮಿತಿಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೇ ನಂಬಿ ನಾರಾಯಣನ್​​ ಅವರಿಗೆ 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಕೇರಳ ಸರ್ಕಾರಕ್ಕೆ ಆದೇಶಿಸಿ ಪ್ರಕರಣದಿಂದ ನಂಬಿ ನಾರಾಯಣನ್ ಅವರನ್ನು ಖುಲಾಸೆಗೊಳಿಸಿತ್ತು.

ಸುಪ್ರೀಂಕೋರ್ಟ್​ ಆದೇಶದ ಬಗ್ಗೆ ತಿರುವನಂತಪುರದಲ್ಲಿ ಪ್ರತಿಕ್ರಿಯಿಸಿರುವ ವಿಜ್ಞಾನಿ ನಂಬಿ ನಾರಾಯಣನ್ ಅವರು, ಸಿಬಿಐ ತನಿಖೆ ಮುಂದುವರೆಯಬೇಕು ಎಂಬುದು ಸಂತಸದ ಸಂಗತಿ. ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇನೆ. ಆದರೆ, ಜೈನ್ ಕಮಿಟಿ ನೀಡಿರುವ ವರದಿಯಲ್ಲಿನ ಅಂಶಗಳು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅತಿಉದ್ದನೇ ಕೂದಲಿನ ಹಿರಿಮೆಯುಳ್ಳ ಯುವತಿಗೆ 12 ವರ್ಷಗಳಲ್ಲಿ ಮೊದಲನೇ ಹೇರ್​​ಕಟ್!

ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಯುವತಿ; ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು!

TAGGED:
Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…