

ವಿಜಯವಾಣಿ ಸುದ್ದಿಜಾಲ ಕೋಟ
ಸರ್ಕಾರ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪಂಚವರ್ಣ ಸಂಘಟನೆಯ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಹೇಳಿದರು.
ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಪಿ.ಎಂ ವಿಶ್ವಕರ್ಮ ಯೋಜನೆ, ಮೀನುಗಾರಿಕಾ ಕಾರ್ಡ್, ರಿಕ್ಷಾ ಚಾಲಕರ ಇ ಕಾರ್ಡ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆ ಉಡುಪಿ ವಿಭಾಗ, ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ, ಎಜ್ಯುಕೇರ್ ಸಂಸ್ಥೆ, ಕೋಟ ಗ್ರಾಮ ಪಂಚಾಯಿತಿ ಸಹಯೋಗವಹಿಸಿದ್ದವು.
ಕೋಟ ಅಮೃತೇಶ್ವರಿ ದೇಗುಲ ಧರ್ಮದರ್ಶಿ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಇಲಾಖೆಯ ರಮೇಶ್ ಪ್ರಭು, ನಾಗಾಂಜನೇಯಲು, ಉಡುಪಿ ಕಾರ್ಮಿಕ ಇಲಾಖೆಯ ಅಧಿಕಾರಿ ಮಲ್ಲಿಕ್ ಪ್ರಸಾದ್, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಪಿಡಿಒ ಸುರೇಶ್ ಬಂಗೇರ, ಅಜಿತ್ ದೇವಾಡಿಗ, ವನೀತಾ ಶ್ರೀಧರ ಆಚಾರ್, ಶಿವರಾಮ ಶೆಟ್ಟಿ, ಚಲುವರಾಜ್, ಕೆ.ಮನೋಹರ್ ಪೂಜಾರಿ, ಲಲಿತಾ ಪೂಜಾರಿ, ಸುರೇಶ್, ಚೇತನ್ ಬಂಗೇರ, ಸುರೇಶ್ ಗಾಣಿಗ ಮತ್ತಿತರರು ಇದ್ದರು. ರವೀಂದ್ರ ಕೋಟ ಸ್ವಾಗತಿಸಿದರು. ನಿತೀನ್ ಕುಮಾರ್ ವಂದಿಸಿದರು. ಸುಜಾತಾ ಬಾಯರಿ ಕಾರ್ಯಕ್ರಮ ನಿರೂಪಿಸಿದರು.