ಸಂವಿಧಾನಕ್ಕೆ ಅವಮಾನ ಕಾಂಗ್ರೆಸಿಗರಿಗೆ ಹವ್ಯಾಸ

blm-3
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಸರ್ಕಾರಿ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿದ್ದನ್ನು ಸಮರ್ಥಿಸಿರುವುರ ಜತೆಗೆ ಅಗತ್ಯ ಬಿದ್ದರೆ ಸಂವಿಧಾನ ಬದಲಿಸಬೇಕಾಗಬಹುದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಸಂವಿಧಾನಕ್ಕೆ ಘೋರ ಅವಮಾನ. ಸಂವಿಧಾನ ವಿರೋಧಿ ಹೇಳಿಕೆಗಳು ಕೈ ಮುಖಂಡರಿಗೆ ಹವ್ಯಾಸವಾಗಿದೆ ಎಂದು ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ಹೊರಹಾಕಿದರು.

ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಕಾರ್ಕಳ ತಾಲೂಕು ಆಫೀಸ್ ಸರ್ಕಲ್ ಬಳಿ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಗೇರು ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ಸಂವಿಧಾನದ ಪುಸ್ತಕ ಹಿಡಿದು ಸಂಸತ್ ಕಲಾಪದಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರಿಗೆ ಸಂವಿಧಾನದಲ್ಲಿರುವ ಪರಿಚ್ಛೇಧಗಳ ವಿವರಗಳೇ ತಿಳಿಸಿಲ್ಲ. ವೋಟ್‌ಬ್ಯಾಂಕ್‌ಗಾಗಿ ಮಾತ್ರ ಅಂಬೇಡ್ಕರ್ ಹೆಸರು ಬಳಸುವ ಕಾಂಗ್ರೆಸಿಗರು ಅಂಬೇಡ್ಕರ್ ಅವರಿಗೆ ಸಂಸತ್ ಪ್ರವೇಶ ನಿಷೇಧಿಸಿದ್ದರು ಎಂದು ಟೀಕಿಸಿದರು.

ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್, ಜಯರಾಮ್ ಸಾಲ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಬೋಳ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಪ್ರಮುಖರಾದ ರಾಕೇಶ್ ಶೆಟ್ಟಿ, ಪ್ರಕಾಶ್ ರಾವ್, ಸುಧಾಕರ್ ಹೆಗ್ಡೆ ಹೆಬ್ರಿ, ಲಕ್ಷ್ಮೀನಾರಯಣ್ ಹೆಬ್ರಿ, ಸಮೃದ್ಧಿ ಪ್ರಕಾಶ್, ಯೋಗಿಶ್ ನಾಯಕ್, ಪ್ರಸಾದ್ ಐಸಿರಾ ಹಾಗೂ ಪುರಸಭಾ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net