ಸಿಮೆಂಟ್ ಮಿಕ್ಸರ್ ಗುದ್ದಿ ಸೂಪರ್‌ವೈಸರ್ ಸಾವು

Dead body
Published on

ಹೆಬ್ರಿ: ಸಿಮೆಂಟ್ ಮಿಕ್ಸರ್ ವಾಹನ ರಿವರ್ಸ್ ತೆಗೆಯುವಾಗ ರಸ್ತೆಬದಿ ನಿಂತಿದ್ದ ಸೂಪರ್‌ವೈಸರ್‌ಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಪಡುಕುಡೂರು ಎಂಬಲ್ಲಿ ಬುಧವಾರ ನಡೆದಿದೆ. ಭಾಷಿವೈ ಮೃತಪಟ್ಟವರು.

ಕುಂದಾಪುರ ಮೂಲದ ಗುತ್ತಿಗೆದಾರರಿಂದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿ ನಡೆಯುತ್ತಿದ್ದು ಫೆ.14ರ ಸಂಜೆ ವೇಳೆ ಕಾಮಗಾರಿಗೆ ಬಳಸುತ್ತಿದ್ದ ನೋಂದಣಿಯಾಗದ ಹೊಸ ಸಿಮೆಂಟ್ ಮಿಕ್ಸರ್ ವಾಹನದ ಚಾಲಕನಾದ ಸಂಜು ಶರಣಪ್ಪ ಎಂಬಾತ ತಾನು ಚಲಾಯಿಸುತ್ತಿದ್ದ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದು, ಆ ವೇಳೆ ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರ್‌ವೈಸರ್ ಭಾಷಿವೈಗೆ ಡಿಕ್ಕಿ ಹೊಡೆದು, ವಾಹನದ ಚಕ್ರ ಅವರ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು.

ಕೂಡಲೇ ಗಾಯಾಳುವನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅದಾಗಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net