

ನವದೆಹಲಿ: ನಿಮ್ಮ ಆಹಾರದಲ್ಲಿನ ಸಣ್ಣ ಬದಲಾವಣೆ ಮಾಡಿಕೊಂಡರೂ ಸಾಕು, ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ನಮ್ಮಲ್ಲಿ ಹಲವರು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಬಿ 12 ಮತ್ತು ಎ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ವಿಟಮಿನ್ ಡಿ ಕೊರತೆಯಿಂದ ಕಡಿಮೆ ರಕ್ತದಲ್ಲಿ ಕಡಿಮೆ ಕ್ಯಾಲ್ಸಿಯಂ ಮಟ್ಟ, ರಿಕೆಟ್ಸ್, ವಯಸ್ಕರಲ್ಲಿ ಮೂಳೆಗಳ ಮೃದು ಆಗುವುದಕ್ಕೂ ಇದು ಕಾರಣವಾಗಬಹುದು.
ಬಾದಾಮಿ, ಗೋಡಂಬಿ, ವಾಲ್‌ನಟ್ ಮತ್ತು ಕಡಲೆಕಾಯಿಗಳಂತಹ ಬೀಜಗಳು ಬಿ-ವಿಟಮಿನ್‌ಗಳು, ಫೋಲೇಟ್ ಮತ್ತು ವಿಟಮಿನ್ ಇ ಗಳ ಉತ್ತಮ ಮೂಲವಾಗಿದೆ. ಈ ಸೂಪರ್‌ಫುಡ್‌ಗಳನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಯಲಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬೀಜಗಳನ್ನು ನೆನೆಸಿಟ್ಟರೆ ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿಯಿಡೀ ನೆನೆಸುವುದರಿಂದ ಫೈಟಿಕ್ ಆಮ್ಲವನ್ನು ತೆಗೆದುಹಾಕಬಹುದು. ಇದರಿಂದಾಗಿ ಈ ಬೀಜಗಳು ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದಾಗಿ ಅವುಗಳ ರುಚಿ ಕೂಡ ಉತ್ತಮವಾಗುತ್ತದೆ.
ಈ ಸೂಪರ್ಫುಡ್ ಸೇವಿಸಿದರೆ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಹುದು:
1. ಮೊಡವೆ ನಿವಾರಣೆಗೆ ಬಾದಾಮಿ ಚಮತ್ಕಾರ:
2. ಪೀರಿಯೆಡ್ಸ್ ತೊಂದರೆಗೆ ನೆನೆಸಿದ ಒಣದ್ರಾಕ್ಷಿ ಮತ್ತು ಕೇಸರ್ ಪರಿಹಾರ:
3. ಕೂದಲು ಉದುರುವಿಕೆಗಾಗಿ ನೆನೆಸಿದ ಕಪ್ಪು ಒಣದ್ರಾಕ್ಷಿ:
4. ನೆನಪಿನಶಕ್ತಿ ಮತ್ತು ಏಕಾಗ್ರತೆಗಾಗಿ ನೆನೆಸಿದ ವಾಲ್‌ನಟ್ಸ್ ಪರಿಹಾರ:
5. ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ಮೊಳಕೆ ಬರಿಸಿದ ಹೆಸರುಕಾಳು:
6. ಮಲಬದ್ಧತೆಗೆ ನೆನೆಸಿದ ಅಂಜೂರ:
ಈ ಎಲ್ಲಾ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಪರಿಣಾಮ ಹೆಚ್ಚು
ಬೀಜ, ನಟ್ಸ್ಗಳನ್ನು ನೆನೆಸುವುದು ಹೇಗೆ?
- ಚೆನ್ನಾಗಿ ತೊಳೆಯಿರಿ
- ಶುದ್ಧ ಕುಡಿಯುವ ನೀರಿನಲ್ಲಿ ರಾತ್ರಿ ನೆನೆಸಿ
- ಬೆಳಿಗ್ಗೆ ನೀರನ್ನು ಎಸೆಯಿರಿ
- ವಾಲ್‌ನಟ್ಸ್/ಅಂಜೂರದ ಹಣ್ಣುಗಳನ್ನು ನೇರವಾಗಿ ಸೇವಿಸಿ.
- ಹೆಸರುಕಾಳನ್ನು 6-8 ಗಂಟೆಗಳ ಕಾಲ ಮೊಳಕೆಯೊಡೆಯಲು ಜರಡಿ ಅಥವಾ ಬಟ್ಟೆಯಿಂದ ಮುಚ್ಚಿ ಬಿಡಬಹುದು. ಇದನ್ನು ಸಣ್ಣಗೆ ಹಬೆಯಲ್ಲಿ ಬೇಯಿಸಿ ಮತ್ತು ಸಲಾಡ್‌ನೊಂದಿಗೆ ತಿನ್ನಬಹುದು. (ಏಜೆನ್ಸೀಸ್)