

ಬೆಂಗಳೂರು: ಬಿಗ್ಬಾಸ್ ಮನೆಯ ಆಟ ರಂಗೆರಿದೆ. ಮೊದಲ ವಾರದ ಜಗಳ, ನಗು, ಆಟ, ಮನೆ ರೂಲ್ಸ್ ಇಟ್ಟುಕೊಂಡು ಮಾತನಾಡಿದ್ದರು ಕಿಚ್ಚ ಸುದೀಪ್. ಒಂಟಿಮನೆಯಲ್ಲಿ ಸ್ಪರ್ಧಿಗಳ ಪೈಕಿ ಮೊದಲ ವಾರದಲ್ಲೇ ಅತಿ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ನಿನ್ನೆ ಕಣ್ಣಿರಿಟ್ಟಿದ್ದ ಪ್ರತಾಪ್, ಸೂಪರ್ ಸಂಡೆ WITH ಸುದೀಪದಲ್ಲಿ ಇಂದು ಕುಣಿಸು ಕುಪ್ಪಳಿಸಿದ್ದಾರೆ.
ಮನೆಯಲ್ಲಿರುವ ಕೆಲವು ಸ್ಪರ್ಧಿಗಳು ಕಾರಣಗಳಿಂದಾಗಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಆ ನೋವಿನಿಂದಾಗಿ ಪ್ರತಾಪ್ ಕಣ್ಣೀರು ಹಾಕಿದ್ದರು. ಆದರೆ ಶನಿವಾರದ ಎಪಿಸೋಡ್ನಲ್ಲಿ ಪ್ರತಾಪ್ ಅವರಿಗೆ ಕಿಚ್ಚ ಸುದೀಪ್ ಕಡೆಯಿಂದ ಬೆಂಬಲ ಸಿಕ್ಕಿತು.
ಸುದೀಪ್ ತುಂಬಿದ ಧೈರ್ಯದಿಂದ ಪ್ರತಾಪ್ ಸಂಪೂರ್ಣ ಬದಲಾಗಿದ್ದಾರೆ. ಅವರ ಝಲಕ್ ತೋರಿಸಲು ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಂದು ಮೊದಲ ವಾರದ ಎಲಿಮಿನೇಷನ್ ನಡೆಯಲಿದೆ.
ಪ್ರತಾಪ್ ಅವರು ಎಲ್ಲರೊಂದಿಗೆ ಬೆರೆಯಬೇಕು ಎಂಬುದು ಬಹುತೇಕರ ಅಭಿಪ್ರಾಯ ಆಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಪ್ರತಾಪ್ ಅವರು ತನಿಶಾ, ಸಂಗೀತಾ ಶೃಂಗೇರಿ ಜತೆ ಸೇರಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರಲ್ಲಿ ಆಗಿರುವ ಬದಲಾವನೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಮನೆಮಂದಿ ಜತೆ ಪ್ರೇಕ್ಷಕರು ಆಶ್ಚರ್ಯದಿಂದ ಪ್ರತಾಪ್ ಅವರ ಬದಲಾವಣೆಯನ್ನು ನೋಡುತ್ತಿದ್ದಾರೆ.
‘ಪ್ರತಾಪ್ ಓಪನ್ಅಪ್ ಆಗಬೇಕು ಎಂದು ತುಕಾಲಿ ಅವರೇ ನೀವು ಹೇಳ್ತಾಯಿದ್ರಿ. ಓಪನ್ಅಪ್ ಮಾಡಿಸುವುದು ಎಂದರೆ ಹೀಗೆ ಸರ್.. ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ. ನಾಟಿ ಟೊಮ್ಯಾಟೋ.. ವೆರಿ ನಾಟಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಅವರ ಈ ಬದಲಾವಣೆಯನ್ನು ನೀವೂ ನೋಡಬೇಕು ಎಂದರೆ ಇಂದು ಸಂಜೆ ಪ್ರಸಾರವಾಗಲಿರುವ ಎಪಿಸೋಡ್ಗಾಗಿ ಕಾಯಲೇ ಬೇಕಾಗಿದೆ.
ಮನೆಯಲ್ಲಿ ಈ ಮೊದಲು ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದ ವಾರದ ಕತೆ ಕಿಚ್ಚನ ಜೊತೆ ಕುರಿತಾಗಿ ಬಿಗ್ಬಾಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.