More

    ದಕ್ಷಿಣ ಆಫ್ರಿಕಾದಲ್ಲಿ ಸನ್​ರೈಸರ್ಸ್​ ಶೈನಿಂಗ್​; ಕಾವ್ಯಾ ಮಿಂಚಿಂಗ್​!

    ಕೇಪ್​ಟೌನ್​: ಐಪಿಎಲ್​ನಲ್ಲಿ ಆಡುವ ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿಯ ಒಡೆತನದ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್​ ತಂಡ ದಕ್ಷಿಣ ಆಫ್ರಿಕಾದ “ಎಸ್​ಎ20′ ಟಿ20 ಲೀಗ್​ನಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಜಯಿಸಿದೆ.

    ಶನಿವಾರ ನಡೆದ ಫೈನಲ್​ನಲ್ಲಿ ಏಡನ್​ ಮಾರ್ಕ್ರಮ್​ ಸಾರಥ್ಯದ ಈಸ್ಟರ್ನ್​ ಕೇಪ್​ ತಂಡ ಡರ್ಬನ್​ ಸೂಪರ್​ಜೈಂಟ್ಸ್​ ಎದುರು 89 ರನ್​ಗಳಿಂದ ಜಯಿಸಿತು. ಸನ್​ರೈಸರ್ಸ್​ ಒಡತಿ ಕಾವ್ಯಾ ಮಾರನ್​ ತಂಡದೊಂದಿಗೆ ಸಂಭ್ರಮಿಸಿದರು.

    ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ 3 ವಿಕೆಟ್​ಗೆ 204 ರನ್​ ಪೇರಿಸಿದರೆ, ಪ್ರತಿಯಾಗಿ ಸೂಪರ್​ಜೈಂಟ್ಸ್ ತಂಡ 17 ಓವರ್​ಗಳಲ್ಲಿ 115 ರನ್​ಗಳಿಗೆ ಸರ್ವಪತನ ಕಂಡಿತು. ಡರ್ಬನ್​ ಸೂಪರ್​ಜೈಂಟ್ಸ್ ತಂಡವು ಐಪಿಎಲ್​ನಲ್ಲಿ ಆಡುವ ಲಖನೌ ಸೂಪರ್​ಜೈಂಟ್ಸ್ ಮಾಲೀಕರ ಒಡೆತನಕ್ಕೆ ಒಳಪಟ್ಟಿದೆ.

    ಐಪಿಎಲ್​ನಲ್ಲಿ ಸನ್​ರೈಸರ್ಸ್ ತಂಡದ ಸೋಲಿನ ವೇಳೆ ಸ್ಟೇಡಿಯಂನಲ್ಲಿ ಸಪ್ಪೆ ಮೋರೆ ಹಾಕುತ್ತಿದ್ದ ಒಡತಿ ಕಾವ್ಯ ಮಾರನ್​, ದಕ್ಷಿಣ ಆಫ್ರಿಕಾದಲ್ಲಿ ನಗುಮೊಗದೊಂದಿಗೆ ಸಂಭ್ರಮಿಸಿರುವುದಕ್ಕೆ ಕ್ರಿಕೆಟ್​ ಪ್ರೇಮಿಗಳು ಖುಷಿಪಟ್ಟಿದ್ದಾರೆ.

    ಈ ಗೆಲುವು ಸನ್​ರೈಸರ್ಸ್​ ಮಾಲೀಕರಿಗೆ ಐಪಿಎಲ್​ಗೆ ಮುನ್ನ ಹೊಸ ತಲೆನೋವನ್ನೂ ತಂದಿಟ್ಟಿದೆ. ಕಳೆದ ಹರಾಜಿನಲ್ಲಿ 20 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿರುವ ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್​ ಕಮ್ಮಿನ್ಸ್​ರನ್ನು ಮುಂದಿನ ಐಪಿಎಲ್​ಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ನೇಮಿಸಬೇಕೇ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಸತತ 2 ಪ್ರಶಸ್ತಿ ಗೆದ್ದುಕೊಟ್ಟಿರುವ ಏಡನ್​ ಮಾರ್ಕ್ರಮ್​ರನ್ನು ಐಪಿಎಲ್​ನಲ್ಲೂ ನಾಯಕರಾಗಿ ಮುಂದುವರಿಸಬೇಕೇ ಎಂಬ ಗೊಂದಲ ಎದುರಾಗಿದೆ.

    ಭಾರತ ಟೆಸ್ಟ್​ ತಂಡದಿಂದ ಶ್ರೇಯಸ್​ಗೆ ಗೇಟ್​ಪಾಸ್​; ರಾಹುಲ್​-ಜಡೇಜಾ ತಂಡಕ್ಕೆ ಮರಳಿದರೂ ಆಡುವ ಗ್ಯಾರಂಟಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts