More

    ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಕುಣಿತ..

    ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಸ್ಯಾಂಡಲ್​ವುಡ್​ಗೆ ಹೊಸಬರೇನಲ್ಲ. ಈ ಹಿಂದೆ ಎರಡು ಐಟಂ ಹಾಡುಗಳಲ್ಲಿ ಸೊಂಟ ಬಳುಕಿಸಿ ಹೋಗಿದ್ದಾರವರು. ಇದೀಗ ಮತ್ತೆ ಅವರನ್ನು ‘ಕಾಟನ್​ಪೇಟೆ ಗೇಟ್’ಗೆ ಕರೆತಂದಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್. ವೈ. ರಾಜ್​ಕುಮಾರ್ ಎಂಬುವವರು ‘ಕಾಟನ್​ಪೇಟೆ ಗೇಟ್’ ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗಿನಲ್ಲಿ ‘ಸೀತಣ್ಣಪೇಟ ಗೇಟ್’ ಟೈಟಲ್​ನೊಂದಿಗೆ ಸಿನಿಮಾ ಮೂಡಿಬರುತ್ತಿದೆ. ಇದೀಗ ಈ ಚಿತ್ರದ ಐಟಂ ಹಾಡಿನ ಮೂಲಕ ಸನ್ನಿ ಲಿಯೋನ್ ಸ್ಯಾಂಡಲ್​ವುಡ್​ಗೆ ಮರಳಿದ್ದಾರೆ.

    ಈ ಮೊದಲು ‘ಡಿಕೆ’ ಚಿತ್ರದ ‘ಸೇಸಮ್ಮ..’ ಮತ್ತು ‘ಲವ್ ಯೂ ಆಲಿಯಾ’ ಚಿತ್ರದ ‘ಕಾಮಾಕ್ಷಿ ಕಾಮಾಕ್ಷಿ..’ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ಮಾರ್ಚ್ ತಿಂಗಳಲ್ಲಿಯೇ ಈ ಹಾಡಿನ ಶೂಟಿಂಗ್ ಮುಗಿದಿರಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಅದು ಸಾಧ್ಯವಾಗಲಿಲ್ಲ. ಇದೀಗ ಈ ತಿಂಗಳಾಂತ್ಯಕ್ಕೆ ಹೈದರಾಬಾದ್​ನಲ್ಲಿ ಚಿತ್ರೀಕರಣಕ್ಕೆ ತಂಡ ಪ್ಲಾನ್ ಮಾಡಿದೆ. ಈ ಚಿತ್ರದಲ್ಲಿ ಯಾಶ್ವನ್, ವೇಣು, ಕಿಸ್ಲೆ ಚೌಧರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಹಾಡಿಗೆ ಎನ್.ಎಸ್. ಪ್ರಸು ಸಂಗೀತ ಸಂಯೋಜಿಸುತ್ತಿದ್ದಾರೆ.

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts