ಅಮೆರಿಕದಲ್ಲಿ ಸನ್ನಿ ಲಿಯೋನ್​ ಕೃಷಿ ಹೇಗಿದೆ ನೋಡಿ!

Sunny
Published on

ಸಿನಿಮಾ, ಜಾಹೀರಾತು ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕಳೆದ ಹಲವು ವರ್ಷಗಳಿಂದ ಭಾರತದಲ್ಲಿಯೇ ನೆಲೆಸಿರುವ ಸನ್ನಿ ಲಿಯೋನ್​, ಇತ್ತೀಚೆಗಷ್ಟೇ ಕುಟುಂಬ ಸಮೇತ ಅಮೆರಿಕಕ್ಕೆ ಹಾರಿದ್ದರು. ಇದೀಗ ಮಕ್ಕಳ ವಿದ್ಯಾಭ್ಯಾಸ ಸೇರಿ ಹಲವು ಕೆಲಸಗಳ ನಿಮಿತ್ತ ಲಾಸ್​ ಏಂಜಲಸ್​ಗೆ ತೆರಳಿದ್ದರು. ಇದೀಗ ಸದ್ದಿಲ್ಲದೆ ಕೃಷಿಯತ್ತ ಮುಖ ಮಾಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಮನೆಗೆ ಬೇಕಾದ ತರಕಾರಿಗಳನ್ನು ಅವರೇ ಬೆಳೆಯುತ್ತಿದ್ದಾರೆ!

ಹೌದು, ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ಕ್ಯಾಲಿಫೋರ್ನಿಯಾದ ಅಂಡರ್​ವುಡ್​ ಫ್ಯಾಮಿಲಿ ಫಾರ್ಮ್​ನಲ್ಲಿ ಬಗೆಬಗೆ ತರಕಾರಿಗಳನ್ನು ಸನ್ನಿ ಲಿಯೋನ್ ಮತ್ತು ದಂಪತಿ ಬೆಳೆಯುತ್ತಿದ್ದಾರೆ. ನಿತ್ಯ ಆಹಾರಕ್ಕೆ ಅವುಗಳನ್ನೇ ಬಳಸಿಕೊಳ್ಳುವ ಬಗ್ಗೆಯೂ ಹೇಳಿದ್ದಾರೆ. ‘ಭೂಮಿ ತಾಯಿಯಿಂದ ಮನೆಗೆಬೇಕಾದ ಎಲ್ಲ ಬಗೆಯ ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ’ ಎಂದು ಜಮೀನಿನಲ್ಲಿ ನಿಂತ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಮಕ್ಕಳೊಂದಿಗೆ ಲಾಸ್ ಏಂಜಲಸ್​ನಲ್ಲಿ ಕಾಲಕಳೆಯುತ್ತಿರುವ ಸನ್ನಿ, ಮರಳಿ ಅಮೆರಿಕಕ್ಕೆ ಬಂದಿದ್ದರ ಬಗ್ಗೆ ಹೇಳಿಕೊಂಡಿದ್ದರು. ‘ಮಕ್ಕಳಿದಾಗ ನಮ್ಮ ಆದ್ಯತೆಗಳು ಬದಲಾಗುತ್ತವೆ. ನಾನು ಮತ್ತು ನನ್ನ ಗಂಡ, ಮಕ್ಕಳೊಂದಿಗೆ ವಾಪಸ್ಸಾಗಿದ್ದೇವೆ. ಕರೊನಾ ವೈರಸ್ ಎಂಬ ಕಿಲ್ಲರ್‌ನಿಂದ ಸುರಕ್ಷಿತವಾಗಿರುವುದಕ್ಕೆ ಇದು ಒಳ್ಳೆಯ ಸ್ಥಳ ಎಂದು ನಮಗನ್ನಿಸಿದೆ. ಹಾಗಾಗಿ ಲಾಸ್ ಏಜಲಂಸ್ ನಮ್ಮ ಸೀಕ್ರೆಟ್ ಗಾರ್ಡನ್‌ಗೆ ನಾವೆಲ್ಲರೂ ವಾಪಸ್ಸಾಗಿದ್ದೇವೆ. ನಮ್ಮ ತಾಯಿ ಇದ್ದಿದ್ದರೂ ಬಹುಶಃ ಇದನ್ನೇ ಮಾಡುತ್ತಿದ್ದರೇನೋ?’ ಎಂದು ಸನ್ನಿ ಬರೆದುಕೊಂಡಿದ್ದಾರೆ. ಜತೆಗೆ ತಮ್ಮ ಮಕ್ಕಳೊಂದಿಗೆ ಇರುವ ಒಂದು ಫೋಟೋ ಶೇರ್ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net