

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಅಭಿಮಾನಿಗಳ ಜತೆ ಸಮಯ ಕಳೆದು, ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು ಸನ್ನಿ ಲಿಯೋನ್. ಆದರೆ, ಈ ಬಾರಿಯ ಭಾನುವಾರ ತುಂಬ ವಿಭಿನ್ನವಾಗಿತ್ತು. ಮತ್ತು ನೆನಪಿನಲ್ಲಿಟ್ಟುಕೊಳ್ಳುವಂತಿತ್ತು. ಅಂದರೆ, ಮಧ್ಯಾಹ್ನದ ಹೊತ್ತಿಗೆ ತರಕಾರಿ ಕತ್ತರಿಸಲು ಅಡುಗೆ ಮನೆಗೆ ಹೋಗಿದ್ದ ಸನ್ನಿ ಲಿಯೋನ್, ಏಕಾಏಕಿ ಬೆರಳನ್ನು ಕತ್ತರಿಸಿಕೊಂಡಿದ್ದಾರೆ. ಗಾಬರಿಯಿಂದ ಪತಿ ಡೇನಿಯಲ್ ಅವರನ್ನು ಕರೆದಿದ್ದಾರೆ. ದಿಕ್ಕು ತೋಚದೆ ಓಡಿ ಬಂದ ಡೇನಿಯಲ್, ಬಟ್ಟೆ ಸುತ್ತಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಆಗಲೇ ನೋಡಿ ಅಸಲಿ ಕಥೆಯನ್ನು ಸನ್ನಿಲಿಯೋನ್ ಹೊರಗೆಡವಿದ್ದಾರೆ. ಡೇನಿಯಲ್ಗೆ ಇದು ಪ್ರ್ಯಾಂಕ್ ವಿಡಿಯೋ ಎಂದಿದ್ದಾರೆ!
ಇದನ್ನೂ ಓದಿ: 10 ದಿನಗಳಲ್ಲಿ ಸದ್ದಿಲ್ಲದೆ ಶೂಟ್ ಆಯ್ತು ‘ದಿ ಪೈಂಟರ್’
ಈ ಪ್ರ್ಯಾಂಕ್ಗೂ ಮುನ್ನ ಲೈವ್ನಲ್ಲಿ ಡೇನಿಯಲ್ಗೆ ಪ್ರ್ಯಾಂಕ್ ಮಾಡುವ ಬಗ್ಗೆ ಅಭಿಮಾನಿಗಳ ಜತೆ ಸನ್ನಿಲಿಯೋನ್ ಹೇಳಿಕೊಂಡಿದ್ದರು. ಅಚ್ಚರಿ ಏನೆಂದರೆ, ಹಾಗೆ ಹೇಳಿದ್ದ ಸನ್ನಿ ಮಾತನ್ನು ಡೇನಿಯಲ್ ಕೇಳಿಸಿಕೊಂಡಿಲ್ಲ ಅನಿಸುತ್ತೆ. ಲೈವ್ ಚಾಟ್ ಮುಗಿಯುತ್ತಿದ್ದಂತೆ, ರಕ್ತವನ್ನೇ ಹೋಲುವ ಕೆಂಪು ಬಣ್ಣ ಮತ್ತು ಬೆರಳ ಹೋಲಿಕೆಯ ವಸ್ತುವನ್ನು ಕೈಬಳಿ ಇಟ್ಟುಕೊಂಡು ಕತ್ತರಿಸಿಕೊಂಡಿದ್ದಾರೆ. ಪಕ್ಕದಲ್ಲೇ ವಿಡಿಯೋ ರೆಕಾರ್ಡಿಂಗ್ ಸಹ ಆನ್ ಮಾಡಿ ಪೂರ್ತಿ ಪ್ರಹಸನವನ್ನು ರೆಕಾರ್ಡ್ ಮಾಡಿದ್ದಾರೆ.
ಇದನ್ನೂ ಓದಿ: ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?
ಇದೆಲ್ಲ ಮುಗಿದ ಬಳಿಕ, ಹೇಗಿತ್ತು ಪ್ರ್ಯಾಂಕ್ ಎಂದು ಡೇನಿಯಲ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಜೀವನದಲ್ಲಿ ನಾನು ತುಂಬ ಗಂಭೀರ ಸ್ವಭಾವದವನು. ಅದೇ ನನ್ನ ವ್ಯಕ್ತಿತ್ವ. ಮತ್ತೆ ಪ್ರ್ಯಾಂಕ್ಗಳೆಂದರೆ ನನಗೆ ಆಗಿಬರಲ್ಲ. ಬೇರೆಯವರಿಗೆ ಮಾಡುವುದಾಗಲಿ, ನನ್ನ ಮೇಲೆ ಪ್ರಯೋಗ ಮಾಡುವುದಾಗಲಿ ಇಷ್ಟ ಆಗುವುದಿಲ್ಲ. ಹಾಗಾಗಿ ನೀನು ಮಾಡಿದ ಈ ಕೆಲಸಕ್ಕೆ ನಾನು ರೇಟಿಂಗ್ ಕೊಡುವುದಿಲ್ಲ. ನನಗನಿಸಿದ ಮಟ್ಟಿಗೆ ನಿನ್ನ ಈ ಕೆಲಸ ಜೀರೋ. ಯಾಕೆಂದರೆ, ಇದೆಲ್ಲ ನನಗೆ ಇಷ್ಟವಾಗುವುದಿಲ್ಲ’ ಎಂದಿದ್ದಾರೆ ಡೇನಿಯಲ್. (ಏಜೆನ್ಸೀಸ್)