More

    ಬಾಲಿವುಡ್‌ಗೆ ಸ್ಟಾರ್ ಮಕ್ಕಳು; ಸನ್ನಿ ಡಿಯೋಲ್ ಪುತ್ರನಿಗೆ ಪಲೋಮಾ ಧಿಲ್ಲೋನ್ ಜೋಡಿ

    ಸ್ಟಾರ್ ಮಕ್ಕಳು ತಂದೆ, ತಾಯಿಯರಂತೆ ಚಿತ್ರರಂಗದಲ್ಲಿ ಮುಂದುವರಿಯಲು ಇಚ್ಛಿಸುವುದು ಸಾಮಾನ್ಯ. ಈಗಾಗಲೇ ಇಂತಹ ಹಲವು ಉದಾಹರಣೆಗಳನ್ನು ಎಲ್ಲ ರಂಗಗಳಲ್ಲೂ ಕಾಣಬಹುದು.

    ಈಗ ಮತ್ತೊಬ್ಬ ಸ್ಟಾರ್ ನಟ, ನಟಿಯ ಮಕ್ಕಳು ಬಾಲಿವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಕಿರಿಯ ಪುತ್ರ ರಾಜ್‌ವೀರ್ ಡಿಯೋಲ್ ಹಾಗೂ ನಟಿ ಪೂನಮ್ ಧಿಲ್ಲೋನ್ ಪುತ್ರಿ ಪಲೋಮಾ, ‘ದೋನೋ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ, ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ಇದಕ್ಕೆ ಆಕ್ಷನ್-ಕಟ್ ಹೇಳುತ್ತಿರುವುದು ನಿರ್ದೇಶಕ ಸೂರಜ್ ಬರ್ಜಾತ್ಯಾ ಪುತ್ರ ಅವಿನಾಶ್ ಬರ್ಜಾತ್ಯಾ. ‘ಮೇನೆ ಪ್ಯಾರ್ ಕಿಯಾ’, ‘ಹಮ್ ಸಾತ್ ಸಾತ್ ಹೈ’, ‘ಹಮ್ ಆಪ್ಕೆ ಹೈ ಕೌನ್’ ಸೇರಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತಿ ಸೂರಜ್ ಅವರದ್ದು. ಈಗ ಅವರ ಪುತ್ರ ಅವಿನಾಶ್ ಕೂಡ ‘ದೋನೋ’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

    ಇದೊಂದು ನವಿರಾದ ಪ್ರೇಮಕಥೆಯಿರುವ ಸಿನಿಮಾ ಎನ್ನಲಾಗಿದ್ದು, ಇತ್ತಿಚೆಗಷ್ಟೆ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ್ದರು. ಅಕ್ಟೋಬರ್ 5ಕ್ಕೆ ಚಿತ್ರ ರಿಲೀಸ್ ಆಗಲಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts