ಬಾಹ್ಯಾಕಾಶದಲ್ಲಿ ಕ್ರಿಸ್​ಮಸ್​​ ಆಚರಣೆಗೆ ಸಿದ್ಧತೆ; ಸಾಂತಾ ಕ್ಲಾಸ್​​ ಲುಕ್​ನಲ್ಲಿ ಸುನಿತಾ ವಿಲಿಯಮ್ಸ್​​​ | Sunita Williams

Untitled design - 2024-12-17T144830.481
Published on

ವಾಷಿಂಗ್ಟನ್​​ ಡಿಸಿ: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್(Sunita Williams) ಜೂನ್‌ನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವುದು ಗೊತ್ತೆ ಇದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿರುವ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಸುನಿತಾ ವಿಲಿಯಮ್ಸ್​​​ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬರು ಬಾಹ್ಯಾಕಾಶದಲ್ಲಿ ನೀರನ್ನು ಹೇಗೆ ಕುಡಿಯುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀರು ಕುಡಿಯುವುದು ಹೇಗೆ ಎಂದು ಪ್ರಯೋಗಿಕವಾಗಿ ತೋರಿಸಿದ್ದರು. ನೀರಿನ ಪ್ಯಾಕೆಟ್ ಅನ್ನು ತೆಗೆಯುತ್ತಾರೆ. ನಂತರ ಕೆಲವು ನೀರಿನ ಗುಳ್ಳೆಗಳು ಸ್ಟ್ರಾ ಮೂಲಕ ಹೊರಬರುತ್ತವೆ. ಗುರುತ್ವಾಕರ್ಷಣ ಬಲ ಇಲ್ಲದ ಕಾರಣ ನೀರಿನ ಗುಳ್ಳೆಗಳು ಹಾರಾತ್ತವೆ, ಬಳಿಕ ಸುನಿತಾ ಅವರು ಹಾರುತ್ತಾ ಆ ನೀರಿನ ಗುಳ್ಳೆಯನ್ನು ಕುಡಿಯುತ್ತಾರೆ.ಈ ವಿಡಿಯೋವನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿತ್ತು.

ಸದ್ಯ ನಾಸಾ ಸುನಿತಾ ವಿಲಿಯಮ್ಸ್​ ಮತ್ತು ಬುಚ್ ವಿಲ್ಮೋರ್ ಅವರಿರುವ ಮತ್ತೊಂದು ಪೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಕ್ರಿಸ್​ಮಸ್​ಗೆ ಉಡುಗೊರೆ ತರುವ ಸಾಂತಾ ಕ್ಲಾಸ್​​ನ ಹೋಲುವಂತ ಉಡುಗೆ ತೊಟ್ಟಿರುವುದನ್ನು ಕಾಣಬಹುದು. ಡಿಸೆಂಬರ್​ 25 ಕ್ರಿಸ್​ಮಸ್​​​ ಆಚರಣೆ ಇರುವುದರಿಂದ ಗಗನಯಾತ್ರಿಗಳು ಕ್ರಿಸ್‌ಮಸ್‌ಗೆ ಮೊದಲು ವಿಡಿಯೋ ಕರೆ ಮೂಲಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ISS) ನಾಸಾ ಸರಕು ವಿತರಣೆ ಮಾಡಿದೆ ಎಂದು ಹೇಳಲಾಗಿದೆ. ಇದರಿಂದ ಕ್ರಿಸ್​​ಮಸ್​​ ರಜಾದಿನದ ಪದ್ಧತಿಯನ್ನು ಗಗನಯಾತ್ರಿಗಳು ಮರುಸೃಷ್ಟಿಸುತ್ತಾರೆ. ಮತ್ತು ಭೂಮಿಯಿಂದ ಕಳುಹಿಸಲಾದ ತಾಜಾ ಪದಾರ್ಥಗಳೊಂದಿಗೆ ತಯಾರಿಸಿದ ವಿಶೇಷ ಊಟವನ್ನು ಆನಂದಿಸುತ್ತಾರೆ ಎನ್ನಲಾಗಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಕಾಶದಲ್ಲಿ ಆರು ತಿಂಗಳು ಕಳೆದಿದ್ದಾರೆ ಮತ್ತು ಫೆಬ್ರವರಿಯಲ್ಲಿ ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ. ಎಂಟು ದಿನಗಳ ಕಾರ್ಯಾಚರಣೆಗಾಗಿ ಜೂನ್‌ನಲ್ಲಿ ಭೂಮಿಯಿಂದ ಬಾಹ್ಯಕಾಶಕ್ಕೆ ತೆರಳಿದರು. ಆದರೆ ಅವರ ವಿಮಾನವು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾರಣ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡರು.ಭೂಮಿಗೆ ಮರಳಲು ಇನ್ನೂ ಎರಡು ತಿಂಗಳು ಬಾಕಿ ಇದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net