ಈ ರಾಶಿಯರಿಗೆ ಇಂದು ಸೂರ್ಯ ದೇವನ ಕೃಪೆಯಿಂದ ಸಿದ್ಧಿ ಯೋಗ ಪ್ರಾಪ್ತಿ! ನಿಮ್ದೂ ಇದೇ ರಾಶಿನಾ....Astrology

untitled-design-30-69100b5959f43
Published on

Astrology: ಸೂರ್ಯದೇವನು ಆಳುವ ಗ್ರಹ ಚಂದ್ರ. ಈ ವಾರವು ಚಂದ್ರನು ತನ್ನ ಮಿತ್ರ ಮಿಥುನದಲ್ಲಿದ್ದು, ಬುಧನು ಎಂಟನೇ ಮನೆಯಲ್ಲಿರುತ್ತಾನೆ. ಈ ವೇಳೆ ಅಧಿ ಯೋಗವನ್ನು ರೂಪಿಸುತ್ತಾನೆ. ಗುರು, ಶುಕ್ರ ಮತ್ತು ಮಂಗಳ ಶುಭ ಸ್ಧಾನಗಳಲ್ಲಿರುತ್ತಾರೆ. ಆದರಿಂದ ಈ ರಾಶಿಯವರು ರಾಜಯೋಗವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಆರ್ದ್ರಾ ನಕ್ಷತ್ರಗಳೊಂದಿಗೆ ಸಂಯೋಜನೆಗೊಳ್ಳುವುದರಿಂದ ಸಿದ್ಧಿ ಯೋಗವೂ ರೂಪುಗೊಳ್ಳುತ್ತದೆ. ಹಾಗಾಗಿ ಈ ಮೂರು ರಾಶಿಯವರು ಇಂದು ವಿವಿಧ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಿದ್ದರೆ, ಆ ರಾಶಿಗಳ ಫಲಾಫಲ ಏನು?

ಮೇಷ

ಮೇಷ ರಾಶಿಯವರಿಗೆ ಈ ದಿನ ತುಂಬಾ ಶುಭದಾಯಕವಾಗಿದೆ. ಇವರು ವಿವಿಧ ಕ್ಷೇತ್ರಗಳಲ್ಲಿ ಮುನ್ನಣೆಯನ್ನು ಹೊಂದಿತ್ತಾರೆ. ಹಾಗೆಯೇ, ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಅವರ ಧೈರ್ಯ ಮತ್ತು ಕೌಶಲ್ಯದಿಂದ ಲಾಭದ ನಿರೀಕ್ಷೆ ಹೆಚ್ಚಿದೆ. ಕುಟುಂಬದೊಂದಿಗೆ ಸಂತಸದ ವಾತಾವರಣ ಇರಲಿದ್ದು, ಪೂರ್ವಜರ ಆಸ್ತಿಯಿಂದ ಪ್ರಯೋಜನಗಳನ್ನು ಪಡೆಯಬಹುದು.

ಮಿಥುನ

ಮಿಥುನ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ. ನಿಮ್ಮ ಯೋಚನೆಯಂತೆ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಹಲವು ದಿನಗಳಿಂದ ಸಿಕ್ಕಿಕೊಂಡಿದ್ದ ಹಣವನ್ನು ಮರಳಿ ಪಡೆಯಬಹುದು. ಕುಟುಂಬದೊಂದಿಗೆ ಸಂತೋಷದ ವಾತಾವರಣ ಇರಲಿದ್ದು, ಪ್ರತಿಯೊಂದು ವಿಚಾರದಲ್ಲೂ ಸಂಗಾತಿಯು ಬೆಂಬಲ ನೀಡುತ್ತಾರೆ. ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗುವ ನಿರೀಕ್ಷೆ ಇದೆ. ಇಂದು ಅದೃಷ್ಟದ ದಿನವಾಗಿದ್ದು, ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ತುಲಾ

ತುಲಾ ರಾಶಿಯವರಿಗೆ ಶುಕ್ರನು ಅನುಕೂಲಕರವಾಗಿರುತ್ತಾನೆ. ಇದು ಅವರಿಗೆ ದಿನವನ್ನು ಶುಭವಾಗಿಸುತ್ತದೆ. ನೀವಿಂದು ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಕುಟುಂಬದೊಂದಿಗೆ ದೂರ ಪ್ರಯಾಣದ ನಿರೀಕ್ಷೆ ಇದೆ. ಕುಟುಂಬ ಸದಸ್ಯರ ಪೂರ್ಣ ಬೆಂಬಲದೊಂದಿಗೆ ನಿಂತು ಹೋದ ಕೆಲಸಗಳು ಮುನ್ನಡೆಯಲು ಸಾಧ್ಯವಾಗುತ್ತದೆ. ತಾಂತ್ರಿಕ ಜ್ಞಾನ ಮತ್ತು ಅನುಭವದಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದೀರಿ. ಈ ದಿನ ಶುಭ ದಿನವಾಗಿದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net