More

  ಗ್ರಾಮ ಮಟ್ಟದಲ್ಲಿ ಸೋಲಿನ ಪರಾಮರ್ಶೆ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿಕೆ

  ಸುಳ್ಯ: ಲೋಕಸಭಾ ಚುನಾವಣೆಯ ಪರಾಭವಕ್ಕೆ ಕಾರಣ ಹುಡುಕುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ಪರಾಮರ್ಶೆ ನಡೆಸಲಾಗುವುದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು.

  ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರನ್ನು ಗೆಲ್ಲಿಸಲು ಹೋರಾಟ ನಡೆಸಿದ್ದರೂ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಬೇಸರ ಇರುವುದು ನಿಜ. ಹಾಗಿದ್ದರೂ ಜನರ ತೀರ್ಪನ್ನು ಒಪ್ಪುತ್ತೇವೆ. ಪ್ರತಿ ಗ್ರಾಮದಲ್ಲಿ ಸೋಲಿನ ಪರಾಮರ್ಶೆ ಮಾಡುತ್ತೇವೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾಡಿದ ಭಾರತ್ ಜೋಡೊ ಯಾತ್ರೆ, ನ್ಯಾಯ ಯಾತ್ರೆಗೆ ಕೊಂಚವಾದರೂ ಸ್ಪಂದನೆ ಸಿಕ್ಕಿದೆ ಎಂಬ ಆತ್ಮತೃಪ್ತಿ ಇದೆ ಎಂದರು.

  ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ, ರಾಮನ ಆಶೀರ್ವಾದ ಈ ಭಾರಿ ಇಂಡಿಯಾಕ್ಕೆ ಸಿಕ್ಕಿದೆಯಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಪ್ರಜಾತಂತ್ರ ಗೆದ್ದಿದೆ ಎಂದರು.

  ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ, ಮುತ್ತಪ್ಪ ಪೂಜಾರಿ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.

  See also  ಹಣ ಆಮಿಷದ ಚುನಾವಣೆ ಎಂದರೆ ಭಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts