ಕಾಸರಗೋಡು: ಜೆಸಿಬಿ ಆಪರೇಟರ್, ಸುಳ್ಯ ಪೆರಾಜೆ ನಿಧಿಮಲೆ ನಿವಾಸಿ ನಾರಾಯಣ– ಜಯಂತಿ ದಂಪತಿ ಪುತ್ರ ಟಿ.ಎನ್.ಕುಮಾರ್(26) ಎಂಬುವರು ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಿಳಿಂಗಾರು ನಿವಾಸಿ ಗಣೇಶ್(36) ಬಂಧಿತ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಟಿ.ಎನ್.ಕುಮಾರ್ ಮೃತದೇಹ ನೀರ್ಚಾಲು ಪಾಡ್ಲಡ್ಕದ ವಾಸ ಸ್ಥಳದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು.

ನಕಲಿ ಸರ್ಟಿಫಿಕೇಟ್, ದಾಖಲೆ ತಯಾರಿ : ಬಂಧಿತರಿಂದ ಮಹತ್ವದ ಮಾಹಿತಿ ಬಹಿರಂಗ