ವಿಷ ಸೇವಿಸಿ ಯುವತಿ ಆತ್ಮಹತ್ಯೆ ಯತ್ನ : ಪ್ರಿಯತಮಗೆ ಹಲ್ಲೆ ಹಿನ್ನೆಲೆ 17 ಮಂದಿ ವಿರುದ್ಧ ಕೇಸು

suicide attempt
Published on

ಕಾಸರಗೋಡು: ಪ್ರಿಯತಮೆಯನ್ನು ಭೇಟಿ ಮಾಡಲು ಆಗಮಿಸಿದ್ದ ಯುವಕನನ್ನು ತಂಡವೊಂದು ಅಪಹರಿಸಿ ಹಲ್ಲೆಗೈದ ಮಾಹಿತಿ ಕೇಳಿ ಆತನ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸುತ್ತಿದ್ದಾಳೆ. ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಸಹೋದರ ಸೇರಿದಂತೆ 17ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವಕ ಹಾಗೂ ಪ್ರೀತಿಸುತ್ತಿರುವ ಯುವತಿ ಸಂಬಂಧಿಗಳಾಗಿದ್ದು, ಇಬ್ಬರೂ ಜತೆಯಾಗಿ ಕಲಿತಿದ್ದರು. ಯುವಕ ಪ್ರಿಯತಮೆಯ ಮನೆಗೆ ಭೇಟಿ ನೀಡುತ್ತಿದ್ದಂತೆ ತಂಡ ಈತನನ್ನು ಅಪಹರಿಸಿ ಹಲ್ಲೆಗೈದಿದ್ದು, ನಂತರ ಆತನಿಗೆ ಜೀವ ಬೆದರಿಕೆಯೊಡ್ಡಿ ಬಿಡುಗಡೆಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net