

ಮಂಗಳೂರು: ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೋರ್ವರಿಂದ 9.78 ಲ.ರೂ. ವಂಚಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೋರ್ವರ ವಾಟ್ಸ್ಆ್ಯಪ್ಗೆ ಬಂದಿದ್ದ ವೆಬ್ಸೈಟ್ ಲಿಂಕ್ನಲ್ಲಿ ವರ್ಕ್ ಫ್ರಂ ಹೋಮ್ ಎಂಬ ಮೆಸೇಜ್ ಇತ್ತು. ಅದನ್ನು ಕ್ಲಿಕ್ ಮಾಡಿದಾಗ 10,000 ರೂ. ಹೂಡಿಕೆ ಮಾಡಿದರೆ 18,000 ರೂ. ದೊರೆಯುತ್ತದೆ ಎಂದು ತಿಳಿಸಲಾಗಿತ್ತು. ಅದನ್ನು ನಂಬಿದ ದೂರುದಾರರು 10,000 ರೂ.ಗಳನ್ನು ಅಪರಿಚಿತರು ತಿಳಿಸಿದ ಖಾತೆಗೆ ಜಮೆ ಮಾಡಿದ್ದರು. ಮರುದಿನ ವೆಬ್ಸೈಟ್ ಮೂಲಕ ದೂರುದಾರರನ್ನು ಸಂಪರ್ಕಿಸಿದ ಅಪರಿಚಿತ ವ್ಯಕ್ತಿಗಳು 40,000 ರೂ. ಹೂಡಿಕೆ ಮಾಡುವಂತೆ ತಿಳಿಸಿದರು. ವೆಬ್ಸೈಟ್ನಲ್ಲಿ ಟಾಸ್ಕ್ ಪೂರ್ತಿಗೊಳಿಸಿದರೆ ಹಣ ವಾಪಸ್ ನೀಡುವುದಾಗಿ ತಿಳಿಸಿದರು. ಅನಂತರ ದೂರುದಾರರು ಟಾಸ್ಕ್ ಪೂರ್ತಿಗೊಳಿಸಿದರು. ಮತ್ತೆ ಅಪರಿಚಿತರು ತಿಳಿಸಿದಂತೆ ದೂರುದಾರರು ಹಂತ ಹಂತವಾಗಿ ಒಟ್ಟು 9.78 ಲ.ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್ ನೀಡದೆ ವಂಚಿಸಲಾಗಿದೆ.