

ಕಾಸರಗೋಡು: ಪತಿಯ ಅಗಲುವಿಕೆಯಿಂದ ಮನನೊಂದು ಮೈಗೆ ಬೆಂಕಿಹಚ್ಚಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ವಿದ್ಯಾನಗರ ನೆಲ್ಕಳ ಕಾಲನಿ ನಿವಾಸಿ ರಾಘವ-ಲಕ್ಷ್ಮೀ ದಂಪತಿ ಪುತ್ರಿ ಪ್ರಪುಲ್ಲ(55)ಮೃತಪಟ್ಟ ಗೃಹಿಣಿ. ಇವರ ಪತಿ ನರಸಿಂಹ ಆರು ತಿಂಗಳ ಹಿಂದೆ ನಿಧನರಾಗಿದ್ದು, ನಂತರ ಪ್ರಪುಲ್ಲ ಖಿನ್ನತೆಗೊಳಗಾಗಿದ್ದರು. ಸೆ.16ರಂದು ಮನೆಯಲ್ಲಿ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ಗಂಭೀರ ಸುಟ್ಟಗಾಯಗಳೊಂದಿಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.