More

    ಕರೊನಾ ಲಾಕ್​ಡೌನ್​; ಆನ್​ಲೈನ್​ನಲ್ಲೇ ಶಾರುಕ್​ ಖಾನ್​ ಪುತ್ರಿಯ ಟ್ಯೂಷನ್​ ಕ್ಲಾಸ್​ ಹೇಗಿದೆ ನೋಡಿ..

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರದ್ದೆ ಸದ್ದು. ಕುಳಿತರೂ ಸುದ್ದಿ, ನಿಂತರೂ ಸುದ್ದಿ. ಅಡುಗೆ ಮಾಡಿದರೆ, ಯೋಗ ಮಾಡಿದರೆ ಎಲ್ಲವನ್ನೂ ಶೇರ್​ ಮಾಡಿಕೊಂಡು ತಮ್ಮ ಫಿಟ್​ನೆಸ್​ ಹೇಗಿದೆ ಎಂಬ ಬಗ್ಗೆ ಆಗಾಗ ವಿಡಿಯೋ ಸಹ ಮಾಡಿ ಎದುರಾಗುತ್ತಿರುತ್ತಾರೆ. ಈಗ ಅದೇ ರೀತಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುಕೊಂಡೇ ಟ್ಯೂಷನ್​ ಕ್ಲಾಸ್​ಗೆ ತೆರಳುತ್ತಿದ್ದಾರೆ. ಅದುವೇ ಬೆಲ್ಲಿ ಡಾನ್ಸ್​ ಕ್ಲಾಸ್​!
    ಹೌದು, ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್​ನಲ್ಲಿ ಸೋಶಿಯಲ್​ ಡಿಸ್ಟನ್ಸಿಂಗ್​ನಲ್ಲಿರುವ ಸುಹಾನಾ ಸೋಶಿಯಲ್​ ಮೀಡಿಯಾದಲ್ಲಿ ಹತ್ತಿರವಾಗಿದ್ದಾರೆ. ಅಂದರೆ ಆನ್​ಲೈನ್​ನಲ್ಲಿ ಬೆಲ್ಲಿಡಾನ್ಸ್​ ತರಗತಿ ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಬೆಲ್ಲಿಡಾನ್ಸ್​ ಕಲಿಯಲು ತಂದೆ ಶಾರುಖ್​ ಪ್ರೇರಣೆ ಎಂಬ ಮಾತನ್ನೂ ಸುಹಾನಾ ಹೇಳಿಕೊಂಡಿದ್ದಾರೆ. ಇತ್ತ ಬೆಲ್ಲಿ ಡಾನ್ಸ್​ ಆನ್​ಲೈನ್​ ಟ್ರೇನಿಂಗ್​ ತೆಗೆದುಕೊಳ್ಳುತ್ತಿರುವುದನ್ನು ಟ್ರೇನರ್​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts