ಪ್ರಭಾಸ್​ ಜೋಕರ್​ನಂತೆ ಕಾಣ್ತಾರೆ ಎಂದ ಅರ್ಷದ್​ಗೆ ಕ್ಲಾಸ್​​​; ಸುಧೀರ್​ ಬಾಬು ಹೇಳಿದಿಷ್ಟು

Untitled-design-2024-08-20T173512.699
Published on

ಹೈದರಾಬಾದ್​​: ನಾಗ್ ಅಶ್ವಿನ್​​ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ ಬಳಿಕ ಬ್ಲಾಕ್​​ಬ್ಲಸ್ಟರ್​ ಹಿಟ್​​​ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದು ಗೊತ್ತೆ ಇದೆ. ಚಿತ್ರದಲ್ಲಿ ಪ್ರಭಾಸ್​​, ಅಮಿತಾಭ್​ಬಚ್ಚನ್​, ಕಮಲ್​ಹಾಸನ್​, ದೀಪಿಕಾ ಪಡುಕೋಣೆ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಾಲಿವುಡ್​ ನಟ ಅರ್ಷದ್​ ವಾರ್ಸಿ, ಕಲ್ಕಿ 2898 ಎಡಿ ಚಿತ್ರದಲ್ಲಿನ ಪ್ರಭಾಸ್​ ನಟನೆಯ ಬಗ್ಗೆ ಕಾಮೆಂಟ್​ ಮಾಡಿದ್ದರು. ಅವರ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಪ್ರಭಾಸ್​ ಅಭಿಮಾನಿಗಳು ಅರ್ಷದ್​ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಿರ್ದೇಶಕ ಅಜಯ್ ಭೂಪತಿ ಮತ್ತು ಅನೇಕ ಟಾಲಿವುಡ್ ಸೆಲೆಬ್ರಿಟಿಗಳು ಅರ್ಷದ್ ಮಾಡಿರುವ ಕಾಮೆಂಟ್​ ಅನ್ನು ಟೀಕಿಸಿದ್ದರು.

ನಮ್ಮ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಕೈಲಾದಷ್ಟು ಕೆಲಸ ಮಾಡಿರುವ ಪ್ರಭಾಸ್​​ ಬಗ್ಗೆ ಅರ್ಷದ್​ ವಾರ್ಸಿ ನೀಡಿರುವ ಹೇಳಿಕೆಗಳು ತಪ್ಪು. ರಚನಾತ್ಮಕವಾಗಿ ಟೀಕೆ ಮಾಡಿದರೆ ಪರವಾಗಿಲ್ಲ ಆದರೆ ಈ ರೀತಿ ಮಾತನಾಡಬಾರದು. ಅರ್ಷದ್​ ಅವರ ಈ ಮಾತುಗಳು ಅವರಿಗೆ ವೃತ್ತಿಪರತೆಯ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅವರಿಂದ ಇಂಥಾ ಕಾಮೆಂಟ್​ಗಳನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಟಾಲಿವುಡ್​ ನಟ ಸುಧೀರ್​ಬಾಬು ತಿಳಿಸಿದರು.

ನಟ ಅರ್ಷದ್​ ವಾರ್ಸಿ, ಕಲ್ಕಿ ಸಿನಿಮಾವನ್ನು ನೋಡಿದೆ. ಸಿನಿಮಾದಲ್ಲಿ ಅಮಿತ್​ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್​​ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್​ ಜೋಕರ್​ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್​ಮ್ಯಾಕ್ಸ್​​​, ಗಿಬ್ಸನ್​​​ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದರು. ಸುಧೀರ್ ಬಾಬು ಮಾಡಿರುವ ಪೋಸ್ಟ್​​ ವೈರಲ್​ ಆಗುತ್ತಿದ್ದು, ಪ್ರಭಾಸ್​​​​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net