MahaKumbh 2025 | ಮಹಾಕುಂಭಮೇಳದಲ್ಲಿ ಭಕ್ತರಿಗೆ ತಮ್ಮ ಕಯ್ಯಾರ ಚಪಾತಿ ಬಡಿಸಿದ ಸುಧಾಮೂರ್ತಿ

Untitled design - 2025-01-22T152150.287
Published on

ಲಖನೌ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳ(MahaKumbh 2025) ನಡೆಯುತ್ತಿರುವುದು ಗೊತ್ತೆ ಇದೆ. ಮಹಾಕುಂಭಕ್ಕೆ ದೇಶ, ವಿದೇಶಗಳಿಂದ ಭಕ್ತರು, ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಸಿನಿ ಸೆಲಿಬ್ರಿಟಿಗಳು ಆಗಮಿಸುತ್ತಿದ್ದಾರೆ. ಎಲ್ಲರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬರುತ್ತಾರೆ. ಈ ಸರಣಿಯಲ್ಲಿ ಇದೀಗ ರಾಜ್ಯಸಭಾ ಸಂಸದೆ ಹಾಗೂ ಸಮಾಜ ಸೇವಕಿ ಸುಧಾಮೂರ್ತಿ ಕೂಡ ಪ್ರಯಾಗರಾಜ್ ಮಹಾಕುಂಭಕ್ಕೆ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿದ ಸುಧಾಮೂರ್ತಿ ಅವರು, ಮೂರು ದಿನ ವ್ರತ ಮಾಡಿದ್ದೇನೆ. ನಾನು ನನ್ನ ತಾಯಿಯ ಅಜ್ಜಿ ಮತ್ತು ಅಜ್ಜನ ಹೆಸರಿನಲ್ಲಿ ತರ್ಪಣವನ್ನು ಅರ್ಪಿಸಬೇಕು. ಆದ್ದರಿಂದ ನಾನು ಮೂರು ದಿನಗಳ ಕಾಲ ಉಪವಾಸ ಮಾಡಿದ್ದೇನೆ. ನಾನು ಮಹಾಕುಂಭದಲ್ಲಿ ಮೂರು ದಿನಗಳ ಕಾಲ ಸ್ನಾನ ಮಾಡಿ ಅವರಿಗೆ ತರ್ಪಣವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಇಷ್ಟು ದೊಡ್ಡ ಮಹಾಕುಂಭವೇಳವನ್ನು ಆಯೋಜಿಸಿರುವ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಶ್ಲಾಘಿಸಿದರು. ಸಿಎಂ ಯೋಗಿ ಅವರು ಉತ್ತಮ ನಾಯಕತ್ವ ನೀಡಿದ್ದು, ಈ ಸಂಪೂರ್ಣ ವ್ಯವಸ್ಥೆ ಅತ್ಯುತ್ತಮವಾಗಿದೆ ಎಂದಿದ್ದಾರೆ.

ಸುಧಾಮೂರ್ತಿ ಅವರು ಮಹಾಕುಂಭಮೇಳದಲ್ಲಿನ ಇಸ್ಕಾನ್ ಶಿಬಿರದಲ್ಲಿ ಭಕ್ತರಿಗೆ ಮಹಾಪ್ರಸಾದ ಬಡಿಸಿದ್ದಾರೆ. ಆಹಾರ ಕೌಂಟರ್‌ನಲ್ಲಿ ನಿಂತು ಮಹಾಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ಚಪಾತಿಗಳನ್ನು ವಿತರಿಸಿದ್ದಾರೆ. ಪ್ರಸಾದ ತಯಾರಿಕೆಗೆ ಅದಾನಿ ಗ್ರೂಪ್ ಹಾಗೂ ಇಸ್ಕಾನ್ ಸಹಯೋಗದೊಂದಿಗೆ ನಿರ್ಮಿಸಲಾದ ಅಡುಗೆ ಮನೆಯಲ್ಲಿರುವ ಯಂತ್ರಗಳನ್ನು ವೀಕ್ಷಿಸಿದ್ದಾರೆ. ಚಪಾತಿ ತಯಾರಿಸಲು ಮೂರು ದೊಡ್ಡ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳು ಒಟ್ಟಾಗಿ ಒಂದು ಗಂಟೆಯಲ್ಲಿ 10,000 ಚಪಾತಿಯನ್ನು ತಯಾರಿಸುತ್ತವೆ. ಮಹಾಕುಂಭಮೇಳ ಪ್ರದೇಶದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net