Mahakumbh 2025 | ತ್ರಿವೇಣಿ ಸಂಗಮದಲ್ಲಿ RCB ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ ಅಭಿಮಾನಿ; 6.6 ಮಿಲಿಯನ್ ಮಂದಿ ವೀಕ್ಷಿಸಿದ ವಿಡಿಯೋ ವೈರಲ್​

Untitled design - 2025-01-22T143920.302
Published on

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವಿಗಾಗಿ ಅಭಿಮಾನಿಗಳು ಆಗಾಗ್ಗೆ ಪ್ರಾರ್ಥಿಸುವುದನ್ನು ನೋಡಿರುತ್ತೇವೆ. ಒಂದಕ್ಕಿಂತ ಹೆಚ್ಚು ಬಾರಿ ಆರ್​ಸಿಬಿ ಐಪಿಎಲ್​​ನಲ್ಲಿ ಫೈನಲ್ ತಲುಪಿದ್ದರೂ ಇದುವರೆಗೆ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಈಗ ಐಪಿಎಲ್ 2025ರ ಮೊದಲು ಪ್ರಯಾಗರಾಜ್‌ನಲ್ಲಿರುವ ಮಹಾಕುಂಭಕ್ಕೆ(Mahakumbh 2025) ಹೋಗಿರುವ ಆರ್‌ಸಿಬಿಯ ಕಟ್ಟಾ ಅಭಿಮಾನಿಯೊಬ್ಬರು ತಮ್ಮೊಂದಿಗೆ ತಂಡದ ಜೆರ್ಸಿಯನ್ನು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಯೊಬ್ಬರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವಾಗ ಆರ್​ಸಿಬಿ ಜೆರ್ಸಿಗೂ ಸ್ನಾನ ಮಾಡಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಾಡಲು ಕೋಟ್ಯಂತರ ಭಕ್ತರು ಮಹಾಕುಂಭಕ್ಕೆ ಆಗಮಿಸುತ್ತಿದ್ದು, ಇದರಲ್ಲಿ ಆರ್‌ಸಿಬಿಯ ಅಭಿಮಾನಿ ಜತೆಗೆ ಜೆರ್ಸಿಯು ಸೇರಿರುವುದನ್ನು ನೀವು ಕಾಣಬಹುದು. ಪ್ರಶಸ್ತಿ ಗೆಲ್ಲದ ನಂತರವೂ ಅಭಿಮಾನಿಗಳು ಆರ್‌ಸಿಬಿಯನ್ನು ತುಂಬಾ ಇಷ್ಟಪಡುತ್ತಾರೆ. ಜೆರ್ಸಿಗೆ ಪುಣ್ಯ ಸ್ನಾನ ಮಾಡಿಸಿದ ನಂತರ ಅಭಿಮಾನಿಗಳು ತಂಡದ ಗೆಲುವಿಗೆ ಹಾರೈಸಿದರು. ಕೊನೆಗೆ ‘ಈ ಸಲ ಕಪ್ ನಮ್ದೆ’ ಎಂದೂ ಹೇಳುವುದನ್ನು ನೀವು ಕೇಳಬಹುದು.

ಈ ವಿಡಿಯೋವನ್ನು ಇದುವರೆಗೂ 6.6 ಮಿಲಿಯನ್ ಮಂದಿ ವೀಕ್ಷಿಸಿದ್ದು ಲಕ್ಷಗಟ್ಟಲೆ ಜನರು ಲೈಕ್​ ಮಾಡಿದ್ದಾರೆ. ದಯವಿಟ್ಟು ಈ ಎಲ್ಲಾ ಅಸಂಬದ್ಧತೆಯನ್ನು ಮಾಡಬೇಡಿ, ಈ ಬಾರಿ ಆರ್‌ಸಿಬಿ ಗೆಲ್ಲಬಹುದು, ಇದರ ನಂತರ ಅವರು ಗೆಲ್ಲುತ್ತಾರೆಯೇ?, ಜರ್ಸಿ ಅಲ್ಲ ಆಟಗಾರರನ್ನು ಮುಳುಗಿಸಿ ಎಂದು ಕಾಮೆಂಟ್​ ಮಾಡಿದ್ದಾರೆ.

ಕಳೆದ ಋತುವಿನಲ್ಲಿ ಅಂದರೆ IPL 2024ರಲ್ಲಿ ಆರ್​ಸಿಬಿ ತಂಡವು ಪ್ಲೇಆಫ್ ತಲುಪಿತ್ತು. ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ತಂಡವು ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಇದರಿಂದಾಗಿ ಅವರು ಎಲಿಮಿನೇಟರ್ ಪಂದ್ಯಗಳನ್ನು ಆಡಬೇಕಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ನಾಲ್ಕು ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದರೊಂದಿಗೆ ಮತ್ತೊಮ್ಮೆ ತಂಡದ ಐಪಿಎಲ್ ಪ್ರಶಸ್ತಿಯ ಕನಸು ಭಗ್ನಗೊಂಡಿತು.

ಮಹಿಳಾ ತಂಡ ಪ್ರಶಸ್ತಿ ಗೆದ್ದಿದೆ

RCB ಮಹಿಳಾ ತಂಡವು 2024ರಲ್ಲಿ ಆಡಿದ ಮಹಿಳಾ ಪ್ರೀಮಿಯರ್ ಲೀಗ್‌ನ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸ್ಮೃತಿ ಮಂಧಾನ ನಾಯಕತ್ವದಲ್ಲಿ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net