ಸುದೀಪ್​ ಬಿಡುಗಡೆ ಮಾಡಿರುವ ಈ ಹೊಸ ವಿಡಿಯೋ ನೋಡಿದ್ರಾ?

Sudeep - Final
Published on

ಬೆಂಗಳೂರು: ಕಳೆದ ಬುದ್ಧವಾರವಷ್ಟೇ ನಟ-ನಿರ್ದೇಶಕ ಸುದೀಪ್​ ಅವರು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕರೊನಾ ಹಾವಳಿ ಹೆಚ್ಚಿರುವುದರಿಂದ ಈ ಬಾರಿ ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಯಾರೂ ಮನೆಯ ಹತ್ತಿರ ಬರಬೇಡಿ ಎಂಬ ಸಂದೇಶವನ್ನು ಅವರು ರವಾನೆ ಮಾಡಿದ್ದರು. ಆದರೂ, ಅಭಿಮಾನಿಗಳು ಸುದೀಪ್​ ಅವರ ಹುಟ್ಟುಹಬ್ಬವನ್ನು ಸೋಷಿಯಲ್​ ಮೀಡಿಯಾ ಮೂಲಕ ಗ್ರಾಂಡ್​ ಆಗಿ ಆಚರಿಸಿದ್ದಾರೆ.

ಹುಟ್ಟುಹಬ್ಬದ ಮರುದಿನವೇ ಸುದೀಪ್​ ಟ್ವೀಟ್​ ಮಾಡಿದ್ದರು. ತಮಗೆ ಶುಭಕೋರಿದ ಎಲ್ಲರಿಗೂ ಥ್ಯಾಂಕ್ಸ್​ ಹೇಳಿದ್ದರು. ಈಗ ಅವರು ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಸಂಭ್ರಮಿಸಿದ ಎಲ್ಲರಿಗೂ ಥ್ಯಾಂಕ್ಸ್​ ಹೇಳಿದ್ದಾರೆ.

'ಸಾರಿ ಈ ವಿಡಿಯೋ ಸ್ವಲ್ಪ ಲೇಟ್​ ಆಯಿತು. ಏಕೆಂದರೆ, ನನ್ನ ಹುಟ್ಟುಹಬ್ಬಕ್ಕೆ ಹಲವರು ವಿಡಿಯೋ ಮಾಡಿದ್ದರು. ಅದನ್ನೆಲ್ಲಾ ನೋಡುವುದಕ್ಕೆ ಸ್ವಲ್ಪ ಸಮಯವಾಯಿತು. ನನ್ನ ಹುಟ್ಟುಹಬ್ಬವನ್ನು ನಾನಾ ರೀತಿ ಸಂಭ್ರಮಿಸಿದ್ದೀರಿ. ಖುಷಿ ಎಂದರೆ ಬಹಳ ಸಣ್ಣ ಪದವಾಗುತ್ತದೆ. ಐ ಫೆಲ್ಟ್​ ಸೋ ಬ್ಲೆಸ್ಡ್​​. ಎಷ್ಟೋ ಜನ ಬಟ್ಟೆ ಕೊಟ್ಟಿರೋದು, ಅನ್ನದಾನ ಮಾಡಿರೋದು, ಸಿಹಿ ಹಂಚಿರೋದು, ದೇವಸ್ಥಾನಗಳಲ್ಲಿ ಪೂಜೆ ಮಾಡಿರೋದು ... ನಿಮ್ಮ ಈ ಎಲ್ಲ ಪ್ರೀತಿಗೆ ನಾನು ಅರ್ಹನಾ ಎಂಬುದು ನನಗೆ ಗೊತ್ತಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.

ಒಳ್ಳೆಯ ರೀತಿಯಲ್ಲಿ ಬಾಳಿ ಬದುಕಿ, ಇನ್ನಷ್ಟು ಸಿನಿಮಾ ಮಾಡಿ ಮನರಂಜಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿರುವ ಸುದೀಪ್​, ತಮ್ಮ ಹುಟ್ಟುಹಬ್ಬವನ್ನು ಆಚರಿಸಿದವರೆಲ್ಲರಿಗೂ ಥ್ಯಾಂಕ್ಸ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net