More

    ರೀಲ್ಸ್​ಗೆ ಕಾಲಿಟ್ಟ ಸುದೀಪ್; ಜಾಕ್​ಲೀನ್​ಗೆ ಕಿಚ್ಚನ ಕನ್ನಡ ಪಾಠ

    ನಟ ಸುದೀಪ್ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್ ಮಾಡಿದ್ದಾರೆ. ತಮ್ಮದೇ ‘ವಿಕ್ರಾಂತ್ ರೋಣ’ ಚಿತ್ರದ ‘ರಾರಾ ರಕ್ಕಮ್ಮ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅದಕ್ಕೆ ಕಾರಣವಾಗಿದ್ದು ಹಾಡಿನಲ್ಲಿ ಅವರ ಜತೆ ಕುಣಿದು ಕುಪ್ಪಳಿಸಿರುವ ರಾಶೆೆಲ್ ಡಿಸೋಜಾ ಅರ್ಥಾತ್ ಗಡಂಗ್ ರಕ್ಕಮ್ಮ ಪಾತ್ರಧಾರಿ ಜಾಕ್​ಲೀನ್ ಫರ್ನಾಂಡಿಸ್ ಎಂಬುದೇ ವಿಶೇಷ.

    ಹೌದು, ಇತ್ತೀಚೆಗಷ್ಟೇ ಜಾಕ್​ಲೀನ್ ಜತೆ ವಿಡಿಯೋ ಕಾಲ್ ಮೂಲಕ ಸುದೀಪ್ ಮಾತನಾಡಿದ್ದಾರೆ. ಐದೂ ಭಾಷೆಗಳಲ್ಲಿ ‘ರಾರಾ ರಕ್ಕಮ್ಮ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಇಬ್ಬರೂ, ನಂತರ ರೀಲ್ಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆಗ ಸುದೀಪ್, ಜಾಕ್​ಲೀನ್​ಗೆ ನೀವು ಕನ್ನಡದಲ್ಲಿ ಮಾತನಾಡಿದರೆ ನಾನು ರೀಲ್ಸ್ ಮಾಡುವುದಾಗಿ ತಿಳಿಸಿದ್ದಾರೆ. ಜತೆಗೆ ಅವರೇ ‘ಕರ್ನಾಟಕದ ಎಲ್ಲ ನನ್ನ ಸ್ನೇಹಿತರಿಗೆ ಈ ಜಾಕ್​ಲೀನ್ ಮಾಡುವ ನಮಸ್ಕಾರಗಳು, ರಕ್ಕಮ್ಮ ಬೇಗ ಬರ್ತಾಯಿದೀನಿ’ ಎಂದು ಹೇಳುವುದಕ್ಕೆ ಜಾಕ್​ಲೀನ್​ಗೆ ಹೇಳಿಕೊಟ್ಟಿದ್ದಾರೆ. ಅದನ್ನು ಜಾಕ್​ಲೀನ್ ಕೂಡ ಪುನರಾವರ್ತಿಸಿದ್ದಾರೆ.

    ಆಗ ಸುದೀಪ್ ತಾವು ಹೇಳಿದಂತೆಯೇ ಮೊದಲ ಇನ್ಸ್​ಟಾ ರೀಲ್​ನಲ್ಲಿ ‘ರಾರಾ ರಕ್ಕಮ್ಮ’ ಹಾಡಿಗೆ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ. ವಿಶೇಷವೆದರೆ, ಈ ರೀಲ್ಸ್ ಬಹಳ ವೈರಲ್ ಆಗಿದ್ದು, ಕಿಚ್ಚನ ಅಭಿಮಾನಿಗಳು ಸಹ ತಮ್ಮದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿಗೆ ಕುಣಿದು ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ, ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಇದೇ ಜುಲೈ 28ರಂದು ವಿಶ್ವದಾದ್ಯಂತ ಥ್ರೀಡಿ ರೂಪದಲ್ಲಿ ತೆರೆಗೆ ಬರಲಿದೆ.

    ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts