ಈ ಬಾರಿ ಬಿಗ್ ಬಾಸ್​ನಿಂದ ಹೊರ ಉಳಿತಾರೆ ಕಿಚ್ಚ! ದಿಢೀರ್ ಬದಲಾಯ್ತು ಪ್ರೋಮೋ

sudeep
Published on

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ  ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೆ ಬಿಗ್ ಬಾಸ್ ಪ್ರೊಮೋ ಕೂಡ ಬಿಡುಗಡೆಯಾಗಿದೆ. ಯಾವಾಗ ಬಿಗ್ ಬಾಸ್ ಪ್ರಸಾರ ಆರಂಭವಾಗಲಿದೆ ಅಂತ   ಕಾಯುತ್ತಿರುವಾಗಲೇ  ಒಂದು ಸುದ್ದಿ ಮಾತ್ರ ಬಿಗ್​ಬಾಸ್​ ವೀಕ್ಷಕರಿಗೆ ನಿರಾಸೆ ಉಂಟು ಮಾಡಿದೆ.

ಸುದೀಪ್ ಬರುತ್ತಾರೆ ಎಂದು ಕಾದು ಕೂತವರಿಗೆ  ಸುದೀಪ್ ಬರೋದು ಅನುಮಾನವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವ ಒಂದು ಪ್ರೋಮೋ ಸೋಶಿಯಲ್​​ ಮೀಡಿಯಾದಲ್ಲಿ  ಸಖತ್​  ವೈರಲ್​ ಆಗುತ್ತಿದೆ.

ಕೆಲವು ವಾರಗಳ ಹಿಂದೆ ಬಿಗ್​ ಬಾಸ್​​ ಕನ್ನಡ ಸೀಸನ್​ 11ರ ಪ್ರೋಮೋ ರಿಲೀಸ್​​ ಆಗಿತ್ತು. ಈ ಪ್ರೋಮೋದಲ್ಲಿ ಕೇವಲ ಲೋಗೋ ಇತ್ತು. ಅಲ್ಲದೆ ಹೊಸ ಸೀಸನ್​​ ಶೀಘ್ರವೇ ಆರಂಭ ಆಗಲಿದೆ ಎಂದು ಬರೆಯಲಾಗಿತ್ತು. #KicchaSudeep ಎಂದು ಬರೆಯೂವ ಮೂಲಕವಾಗಿ ಎಲ್ಲರಿಗೂ ಸರ್​ಪ್ರೈಸ್​​ ನೀಡಲಾಗಿತ್ತು. ಸುದೀಪ್​​ ಈ ಸೀಸನ್​​ನಲ್ಲಿ ಇರುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಈ ಹ್ಯಾಶ್​​ಟ್ಯಾಗ್​​ ತೆಗೆಯಲಾಗಿದೆ.

ಈಗ ಒಂದು ದಿನದ ಹಿಂದೆ ಈ ಪ್ರೋಮೋದ ಕ್ಯಾಪ್ಶನ್ ಎಡಿಟ್ ಮಾಡಲಾಗಿದ್ದು, ಸುದೀಪ್  #KicchaSudeep ಹ್ಯಾಶ್​ಟ್ಯಾಗ್ ಕಾಣೆಯಾಗಿದೆ. ಬಿಗ್ ಬಾಸ್ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಇನ್​ಸ್ಟ್ರಾಗ್ರಾಮ್​ನಲ್ಲಿ ಪಿನ್ ಮಾಡಿ ಇಟ್ಟಿದೆ. ಈ ವಿಡಿಯೋಗೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.  ಇದನ್ನು ಗಮನಿಸಿದ ಬಿಗ್​ಬಾಸ್​​  ವೀಕ್ಷಕರು  ಸುದೀಪ್​ ಅವರು ಬಿಗ್​ಬಾಸ್​ ಕಾರ್ಯಕ್ರಮ ನಡೆಸಿಕೊಡಲ್ವಾ? ಎಂದು ಪ್ರಶ್ನೆ ಹುಟ್ಟು ಹಾಕುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಗೆ ಸುದೀಪ್ ನಿರೂಪಣೆ ಮಾಡೋದಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ರಿಷಭ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಬಿಗ್ ಬಾಸ್ ನಡೆಸಿಕೊಡ್ತಾರೆ ಅಂತಾನೂ ಹೇಳಲಾಗುತ್ತಿದೆ.

ಸುದೀಪ್ ಅವರೇ ಈ ಸೀಸನ್ ನಡೆಸಿ ಕೊಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.,ಸುದೀಪ್  ನಡೆಸಿಕೊಡುತ್ತಾರೆಯೇ ಅನ್ನೋ  ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತ ಮಾಹಿತಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net