ಟ್ಯಾಟೂ ಹಾಕಿಸಿಕೊಂಡ ಕಿಚ್ಚನ ಪುತ್ರಿ; ಸಾನ್ವಿ ಸುದೀಪ್‌, ಏನಿದರ ಅರ್ಥ? ಎಂದ್ರು ಫ್ಯಾನ್ಸ್‌

sanvi
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಸುದೀಪ್​​ ಅವರ ಪುತ್ರಿ ಸಾನ್ವಿ ಸುದೀಪ್​​ ಕತ್ತಿನ ಭಾಗದಲ್ಲಿ ‘ಪೀಕು’ (PIKU) ಹೊಸ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂವಿನ ಅರ್ಥವನ್ನು ಸಹ ಅವರೇ ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸಾನ್ವಿ ಸುದೀಪ್, ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಲ್ಲ. ಪೀಕು, ಸಾನ್ವಿಯ ತಾಯಿ ಪ್ರಿಯಾ ಸುದೀಪ್​ರ ಅಡ್ಡ ಹೆಸರು. ಪ್ರಿಯಾ ಸುದೀಪ್​ರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ.

ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಮಾದರಿಯಲ್ಲಿ ಸಾನ್ವಿ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಕ್ಕೆ ಹಲವಾರು ಲೈಕ್, ಕಮೆಂಟ್​ಗಳು ಬಂದಿವೆ.

ಸಾನ್ವಿ ಸುದೀಪ್ ಹಾಡು ಹಾಡುವುದು, ಬರೆಯುವುದು, ಚಿತ್ರ ಬಿಡಿಸುವುದು ಇನ್ನೂ ಕೆಲವು ಕಲಾ ಪ್ರಕಾರಗಳಲ್ಲಿ ಸಾನ್ವಿ ಆಸಕ್ತಿವಹಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್​ರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net