ಇದು ಸರಿನಾ? ಹಾರ್ದಿಕ್​ರನ್ನು ಪ್ರೀತಿಸುತ್ತಿದ್ದಾಗಲೆ ಮಾಜಿ ಪ್ರಿಯಕರನ ​​ಜತೆ ಸುತ್ತಾಡಿದ್ದಳು ನತಾಶಾ!

hardikpandya
Published on

ಮುಂಬೈ: ಸೋಶಿಯಲ್​​ ಮೀಡಿಯಾದಲ್ಲಿ ಸ್ಟಾರ್​ ಕ್ರಿಕೆಟರ್​ ಹಾರ್ದಿಕ್​​ ಪಾಂಡ್ಯ ಹಾಗೂ ನತಾಶಾ ವಿಚ್ಛೇದನ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ಈ ಜೋಡಿ ಓಪನ್​ ಆಗಿ ಮಾತನಾಡಿಲ್ಲ. ದಂಪರಿ ಬೇರೆಯಾಗುತ್ತಿದ್ದಾರೆ ಎನ್ನುವ ವದಂತಿ ನಡುವೆ ಇದೀಗ ನತಾಶಾ ಮಾಜಿ ಗೆಳಯನ ಕುರಿತಾಗಿ ಹೇಳಿಕೊಂಡಿರುವ ವಿಡಿಯೋವೊಂದು ಹಾರ್ದಿಕ್​​ ಪಾಂಡ್ಯ ಜತೆಗಿನ ಸುದ್ದಿ ಬೆನ್ನಲ್ಲೆ ಇದೀಗ ವೈರಲ್​ ಆಗುತ್ತಿದೆ.

ಹಾರ್ದಿಕ್​ನ ಪ್ರೀತಿಸೋ ಮೊದಲು ನತಾಶಾ ಕಿರುತೆರೆ ನಟ ಅಲಿ ಗೂನಿ ಜತೆ ಡೇಟ್​​ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ನಡುವಿನ ಬ್ರೇಕಪ್ ಬಳಿಕ ನತಾಶಾಗೆ ಹಾರ್ದಿಕ್ ಸಿಕ್ಕರು. ಮೊದಲು ಪ್ರೀತಿಸುತ್ತಿದ್ದ ಇವರು ನಂತರ ಎಂಗೇಜ್​ಮೆಂಟ್ ಮಾಡಿಕೊಂಡರು. ಮಗು ಪಡೆದ ಬಳಿಕ ಮದುವೆ ಆದರು. ಈಗ ಇವರು ಬೇರೆ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ನತಾಶಾ ಹಾಗೂ ಅಲಿ ಇಬ್ಬರೂ ‘ನಚ್ ಬಲಿಯೇ ಸೀಸನ್ 9’ ರಿಯಾಲಿಟಿ ಶೋಗೆ ಒಟ್ಟಾಗಿ ಬಂದಿದ್ದರು. ಈ ರಿಯಾಲಿಟಿ ಶೋ ನಡೆದಿದ್ದು 2018ರಲ್ಲಿ. ಈ ವಿಡಿಯೋದಲ್ಲಿ ಜಡ್ಜ್​ ಅಹ್ಮದ್ ಖಾನ್ ಅವರು ಅಲಿ ಹಾಗೂ ನತಾಶಾಗೆ ಪ್ರಶ್ನೆ ಮಾಡಿದ್ದಾರೆ. ‘ನೀವು ರಿಲೇಶನ್​ಶಿಪ್​ನಲ್ಲಿದ್ದು ಐದು ವರ್ಷಗಳ ಬಳಿಕ ಬ್ರೇಕಪ್ ಮಾಡಿಕೊಂಡಿರೇ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಲಿ, ‘ನಾವು ಬ್ರೇಕಪ್ ಮಾಡಿಕೊಂಡು 4 ವರ್ಷ ಕಳೆದಿದೆ. ಆಗಾಗ ಭೇಟಿ ಆಗುತ್ತ ಇರುತ್ತೇವೆ’ ಎಂದರು. ‘ನಾವು ಎರಡು ಬಾರಿ ರಿಲೇಶನ್​ಶಿಪ್​ನಲ್ಲಿ ಇದ್ದೆವು’ ಎಂದು ನತಾಶಾ ಹೇಳಿದ್ದಾರೆ. ‘ನಿಮ್ಮ ರಿಲೇಶನ್​ಶಿಪ್ ಸ್ಟೇಟಸ್ ಏನು ಹೇಳಿ’ ಎಂದು ಅಹ್ಮದ್ ಕೇಳಿದರು. ‘ನನಗೂ ಗೊತ್ತಿಲ್ಲ’ ಎನ್ನುವ ಉತ್ತರ ಅಲಿ ಕಡೆಯಿಂದ ಬಂತು.

ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಜನವರಿ 2020ರಲ್ಲಿ ಎಂಗೇಜ್​ ಆದರು. ಆ ಬಳಿಕ ಅವರು ಮಗುವನ್ನು ಪಡೆದರು. 2023ರಲ್ಲಿ ರಾಜಸ್ಥಾನದ ಉದಯ್​ಪುರದಲ್ಲಿ ಇವರು ಮದುವೆ ಆಗಿದ್ದಾರೆ.

2018ರಲ್ಲಿ ಹಾರ್ದಿಕ್ ಹಾಗೂ ನತಾಶಾ ಲವ್ ಸ್ಟೋರಿ ಆರಂಭ ಆಗಿತ್ತು. ಆದಾಗ್ಯೂ ನತಾಶಾ ಎಕ್​ ಬಾಯ್​ಫ್ರೆಂಡ್​ನ ಏಕೆ ಭೇಟಿ ಮಾಡುತ್ತಿದ್ದರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹಾರ್ದಿಕ್ ಜೊತೆ ಡೇಟ್ ಮಾಡುತ್ತಿರುವಾಗಲೇ ನತಾಶಾ ಅವರು ಮಾಜಿ ಬಾಯ್​ಫ್ರೆಂಡ್ ಅಲಿ ಅವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net