

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸ್ಪಷ್ಟ ಜ್ಞಾನ, ಚಿಂತನಾಶಕ್ತಿ ಮತ್ತು ಪೂರ್ವ ಸಿದ್ಧತೆ ಇದ್ದರೆ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು. ಭಯ ಪಡುವ ಅಗತ್ಯ ಇಲ್ಲ. ಅಧ್ಯಯನವನ್ನು ತಪಸ್ಸು ಎಂದು ಪರಿಗಣಿಸಿ ಅಭ್ಯಸಿಸಿದರೆ ಯಶಸ್ಸು ನಿಶ್ಚಿತ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್ ಹೇಳಿದರು.
ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ತಯಾರಿಗಳ ಕುರಿತು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಸಿಬಿಎಸ್‌ಇ ಗೌರವ ನಿರ್ದೇಶಕ ಸಿ.ಕೆ.ಮಂಜುನಾಥ್ ಮಾತನಾಡಿದರು. ಅದಮಾರು ಮಠ ಶಿಕ್ಷಣ ಮಂಡಳಿ ಸಿಬಿಎಸ್‌ಇ ನಿರ್ದೇಶಕರಾಗಿ ನೇಮಕವಾಗಿರುವ ಸಿ.ಕೆ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಪ್ರಭಾರ ಪ್ರಾಂಶುಪಾಲ ಜಯಶಂಕರ ಕಂಗಣ್ಣಾರು, ವಿಜ್ಞಾನ ವಿಭಾಗದ ಸಂಯೋಜಕ ರಾಧಾಕೃಷ್ಣ ಕಿಣಿ ಉಪಸ್ಥಿತರಿದ್ದರು. ಸಹನಾ ಎಂ.ಜೆ. ಸ್ವಾಗತಿಸಿದರು. ಸಮರ್ಥ ಕೆ.ಎಸ್. ವಂದಿಸಿದರು. ಸುಚೇತಾ ಕಾರ್ಯಕ್ರಮ ನಿರೂಪಿಸಿದರು.