ಸಂಕಲ್ಪ ಸರಿಯಿದ್ದಾಗ ದೇವರ ಕಾರ್ಯದಲ್ಲಿ ಯಶಸ್ಸು ಸಾಧ್ಯ

rajata
rajata
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ದೇವರ ಚಿತ್ತಕ್ಕೆ ನಮ್ಮ ಸಂಕಲ್ಪ ಸರಿಯಾಗಿ ಇದ್ದರೆ ಖಂಡಿತವಾಗಿಯೂ ಅದಕ್ಕೆ ಯಶಸ್ಸನ್ನು ತಾಯಿ ನಮಗೆ ಕೊಡುತ್ತಾಳೆ ಎನ್ನುವುದಕ್ಕೆ ಈ ಸ್ಥಳವೇ ನಿದರ್ಶನವಾಗಿದೆ ಎಂದು ಕಾಪು ಶ್ರೀ ಮೂರನೇ ವಾರಿಗುಡಿ ದೇವಸ್ಥಾನದ ಕೆ.ಪಿ.ಶ್ರೀನಿವಾಸ ತಂತ್ರಿ ಹೇಳಿದರು.

1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಾಣಗೊಳ್ಳಲಿರುವ ಕಾಪು ಶ್ರೀ ಮೂರನೇ ವಾರಿಯಮ್ಮ ದೇವಸ್ಥಾನದ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಕಾಪು ಮೂರು ವಾರಿಯಮ್ಮ ದೇವಿಯ ಸಮ್ಮಿಳಿತವಾದ ಅಪೂರ್ವವಾದ ಸಾನ್ನಿಧ್ಯವಾಗಿದೆ. ಮೂರನೇ ವಾರಿಗುಡಿಯಲ್ಲಿ ರಜತ ಗದ್ದುಗೆ ಎಂಬ ಸಂಕಲ್ಪ ವಾಡಿದ್ದೇವೆ. ತಾಯಿಯ ಇಚ್ಛಾಶಕ್ತಿಯಿಂದಾಗಿ ರಜತ ಗದ್ದುಗೆಗೆ ಅಗತ್ಯವಾದ ದೇಣಿಗೆ ಬರುತ್ತಿದೆ ಎಂದರು.

ವಿಜ್ಞಾಪನಾ ಪತ್ರ ಬಿಡುಗಡೆ ವಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಾತನಾಡಿ, ಸವಾಜದ ಋಣ ತೀರಿಸುವ ಮೂಲಕ ಋಣ ಮುಕ್ತರಾಗಬೇಕೆಂದು ಶಾಸ್ತ್ರ ಹೇಳುತ್ತದೆ. ಜಾತಿ, ಧರ್ಮ, ಪಕ್ಷ ಮರೆತು, ಇಡೀ ಊರು ಒಂದೇ ತಾಯ ಮಕ್ಕಳಾಗಿ ಕುಟುಂಬದ ರೀತಿಯಲ್ಲಿ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಕಾಪು, ಶ್ರೀ ಹಳೇ ವಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ, ಶ್ರೀ ಹೊಸ ವಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಶ್ರೀ ಮೂರನೇ ವಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಕೊತ್ವಾಲಗುತ್ತು, ಕಾರ್ಯದರ್ಶಿ ಶ್ರೀಕರ ಎಸ್.ಶೆಟ್ಟಿ ಕಲ್ಯ, ಮುಂಬೈ ಸಮಿತಿ ಅಧ್ಯಕ್ಷ ಶಶಿಧರ ಕೆ.ಶೆಟ್ಟಿ ಇನ್ನಂಜೆ, ಅನಿಲ್ ಬಲ್ಲಾಳ್ ಕಾಪು ಬೀಡು, ಗಿರೀಶ್ ಪಾತ್ರಿ, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು. ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ನಿರ್ಮಲ್ ಕುವಾರ್ ಹೆಗ್ಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net