ಹೆಬ್ರಿ: ಮುನಿಯಾಲು ಎಂಬ ಸಣ್ಣ ಗ್ರಾಮೀಣ ಪ್ರದೇಶದಲ್ಲಿ 12 ವರ್ಷಗಳ ಹಿಂದೆ ಸಂಘಟನೆ ಹುಟ್ಟು ಹಾಕಿ ಬಹಳಷ್ಟು ಬಡ ಕುಟುಂಬಕ್ಕೆ ತನ್ನಿಂದಾದಷ್ಟು ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ಸಹಾಯ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಮುನಿಯಾಲು ಹಿಂದು ಹೆಲ್ಪ್‌ಲೈನ್ ಜನ ಸೇವಾ ಟ್ರಸ್ಟ್ ವತಿಯಿಂದ ಮುದ್ರಾಡಿಯಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್‌ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಡಾ.ಸುದರ್ಶನ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಾನಂದ ಶೆಟ್ಟಿ, ಮುನಿಯಾಲು ಗೋಧಾಮದ ಪ್ರವರ್ತಕ ರಾಮಕೃಷ್ಣ ಆಚಾರ್, ಉದ್ಯಮಿ ದಿನೇಶ್ ಪೈ, ಪ್ರಮುಖರಾದ ರಾಘವೇಂದ್ರ ಭಟ್, ಡಾ.ಎಂ.ಎಸ್.ರಾವ್, ಭುಜಂಗ ಶೆಟ್ಟಿ, ವಸಂತಿ ಪೂಜಾರಿ, ಕೃಷ್ಣಕಾಂತ್ ನಾಯಕ್ ಮುನಿಯಾಲು, ಸಂತೋಷ ಅಮೀನ್, ರಾಜೇಶ್ ಶೆಟ್ಟಿ ಮುನಿಯಾಲು ಇದ್ದರು. ಸುಹಾಸ್ ಶೆಟ್ಟಿ ಮುಟ್ಲುಪಾಡಿ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ನಾಯಕ್ ವಂದಿಸಿದರು.