ಶಾರದಾ ಟ್ರಸ್ಟ್‌ನಿಂದ ಸಹಾಯಧನ ವಿತರಣೆ

New Project (16)
Published on

ಉಳ್ಳಾಲ: ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಲ್ಲಿರುವ ಸಮಿತಿ ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು. ಸದಸ್ಯರಾದ ಮಾಸ್ಟರ್ ಲಿಶನ್ ಕಣೀರ್‌ತೋಟ, ಕಿಶೋರ್ ಕುಮಾರ್ ಕೊಲ್ಯ, ರಾಮಚಂದ್ರ ಕುಂಪಲ, ಹರೀಶ್ ಕೊಲ್ಯ, ಬೇಬಿ ಕುಮಾರ್ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಸಾರಸ್ವತ ಕಾಲನಿಯ ತಾರಮ್ಮ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net