ಸಮಾಜಮುಖಿ ಸೇವಾ ಕೈಂಕರ್ಯದಿಂದ ಸಂತೃಪ್ತಿ : ಎಂ.ಆರ್.ಜಯೇಶ್ ಅಭಿಮತ

New Project (33)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಸೀನಿಯರ್ ಚೇಂಬರ್ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗಿ ಅಶಕ್ತರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವುದು ಸಂಸ್ಥೆಯ ಧ್ಯೇಯ. ಸಮಾಜಮುಖಿ ಸೇವಾ ಕೈಂಕರ್ಯದಿಂದ ಮಾನಸಿಕ ಸಂತೃಪ್ತಿ ದೊರಕುತ್ತದೆ ಎಂದು ಸೀನಿಯರ್ ಚೇಂಬರ್ ರಾಷ್ಟ್ರಾಧ್ಯಕ್ಷ ಎಂ.ಆರ್.ಜಯೇಶ್ ಹೇಳಿದರು.

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್‌ನ 2025-26ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ, ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್, ಸೀನಿಯರ್ ಚೇಂಬರ್ ರಾಷ್ಟ್ರೀಯ ಸಂಯೋಜಕ ಕಿಶೋರ್ ಫರ್ನಾಂಡಿಸ್, ಮಂಗಳೂರು ಸೀನಿಯರ್ ಚೇಂಬರ್ ಅಧ್ಯಕ್ಷ ವಿಕಾಸ್ ಶೆಟ್ಟಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ನೂತನ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಸೀನಿಯರೇಟ್ ಅಧ್ಯಕ್ಷೆ ಲೀಲಾಕುಮಾರಿ ವಿಶ್ವನಾಥ್, ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ನೂತನ ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ಮೋನಪ್ಪ ಡಿ., ಕೋಶಾಧಿಕಾರಿ ಪ್ರಕಾಶ್ ಕೆ.ಎಸ್. ಉಪಸ್ಥಿತರಿದ್ದರು. ಸದಸ್ಯರಾದ ಚಂದ್ರಶೇಖರ ನಾಯರ್, ಪ್ರಭಾಕರ ಪಡ್ರೆ, ಮಾಧವ ದೇವರಗದ್ದೆ, ಲೋಕೇಶ್ ಬಿ.ಎನ್., ಪ್ರಕಾಶ್ ಕಟ್ಟೆಮನೆ, ಪ್ರಶಾಂತ್ ಕೋಡಿಬೈಲ್, ಅಶೋಕ್ ಕುಮಾರ್ ಮೂಲೆಮಜಲು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಮೋನಪ್ಪ ಡಿ. ವರದಿ ವಾಚಿಸಿದರು.

ಪದಾಧಿಕಾರಿಗಳಿಗೆ ಪದಪ್ರದಾನ

ವೆಂಕಟೇಶ ಎಚ್.ಎಲ್. ಹಾಗೂ ತಂಡಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ಧಗಂಗಯ್ಯ ಪ್ರಮಾಣವಚನ ಬೋಧಿಸಿದರು. ವಿಟಿಯು ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ.ಶಿವಕುಮಾರ್ ಹೊಸೋಳಿಕೆ ಹಾಗೂ ಡಾ.ರವಿಕಕ್ಕೆಪದವು, ಸಮಾಜ ಸೇವಾ ಟ್ರಸ್ಟಿನ ಸಮಾಜಸೇವಕ ಸದಸ್ಯರನ್ನು ಗೌರವಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ಪಿನ್ ನೀಡಿ ಬರಮಾಡಿಕೊಂಡರು. ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಜ ವಲಯ ಅರಣ್ಯಾಧಿಕಾರಿ, ಸಹಾಯಕ ರಕ್ಷಕ ಉಪನಿರೀಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net