ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಜಲಾವೃತ: ಸಂಚಾರ ಸ್ಥಗಿತ

kumaradhara r

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶ, ಪಶ್ಚಿಮ ಘಟ್ಟ, ಕುಮಾರಪರ್ವತ ಭಾಗಗಳಲ್ಲಿ ಗುರುವಾರ ದಿನವಿಡೀ ಸುರಿದ ಭಾರೀ ಮಳೆಗೆ ಪುಣ್ಯ ನದಿ ಕುಮಾರಧಾರದಲ್ಲಿ ಭಾರೀ ಪ್ರವಾಹ ಹರಿದು ಬಂದಿದೆ. ಗುರುವಾರ ಸಂಜೆಯ ವೇಳೆಗೆ ಕುಮಾರಧಾರ ಪ್ರವಾಹವು ಮತ್ತಷ್ಟು ಅಧಿಕಗೊಂಡಿದ್ದು ಕುಮಾರಧಾರದ ತಿರುಗಣೆಗುಂಡಿ ಎಂಬಲ್ಲಿ ಕುಮಾರಧಾರ ನದಿಯು ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತರ್ ರಾಜ್ಯ ಹೆದ್ದಾರಿಯನ್ನು ವ್ಯಾಪಿಸಿದೆ ಈ ಕಾರಣದಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.ರಸ್ತೆಗೆ ನೀರು ವ್ಯಾಪಿಸಿರುವುದರಿಂದ ಪುತ್ತೂರು-ಸುಬ್ರಹ್ಮಣ್ಯ ಸಂಚಾರ ಬಂದ್ ಆಗಿದೆ.

ದೇವರಹಳ್ಳಿ ರಸ್ತೆ ಬ್ಲಾಕ್

ಯೇನೆಕಲ್ಲಿನ ಮಧುವನ ಬಳಿಯಿಂದ ದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಲ್ಲಾಜೆ ಹೊಳೆಯಲ್ಲಿನ ಪ್ರವಾಹದಿಂದ ಮುಳುಗಡೆಯಾಗಿದೆ.ಈ ಕಾರಣದಿಂದ ಈ ರಸ್ತೆ ಸಂಚಾರವೂ ಸ್ಥಗಿತವಾಗಿದೆ. ಇದಲ್ಲದೆ ಪಂಜದ ಬೊಳ್ಮಲೆ ಸೇತುವೆ ಇತ್ಯಾದಿಗಳು ಮುಳುಗಡೆ ಭೀತಿ ಎದುರಿಸುತ್ತಿದೆ.

ದರ್ಪಣತೀರ್ಥ ಸೇತುವೆ ಮುಳುಗಡೆ ಭೀತಿ

ಕುಮಾರಧಾರ ನದಿ ನೀರು ಕ್ಷಣ ಕ್ಷಣಕ್ಕೂ ಅಧಿಕವಾಗುತ್ತಿದ್ದು ತಿರುಣೆಗುಂಡಿಯಿಂದ ದರ್ಪಣತೀರ್ಥ ಸೇತುವೆ ತನಕ ವ್ಯಾಪಿಸುತ್ತಿದೆ.ಇದರಿಂದಾಗಿ ಕುಮಾರಧಾರ-ದೋಣಿಮಕ್ಕಿ ಸಂಪರ್ಕ ರಸ್ತೆ ಮುಳುಗಡೆಗೊಂಡಿದೆ.ಕುಮಾರಧಾರದಂತೆ ಇದರ ಉಪನದಿ ದರ್ಪಣತೀರ್ಥವು ತುಂಬಿ ಹರಿಯುತ್ತಿದ್ದು ದರ್ಪಣತೀರ್ಥ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ

ಕುಮಾರಧಾರ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ನೀರು ಕ್ಷಣ ಕ್ಷಣಕ್ಕೂ ಅಧಿಕಗೊಂಡು ಸ್ನಾನಘಟ್ಟದಿಂದ ಸುಮಾರು 100ಮೀನಷ್ಟು ದೂರ ವ್ಯಾಪಿಸಿದೆ.ಕುಮಾರಧಾರದಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಇದೀಗ ನೀರು ನುಗ್ಗುವ ಆತಂಕ ಎದುರಾಗಿದೆ.ಶ್ರೀ ದೇವರ ಜಳಕದ ಕಟ್ಟೆ, ಶೌಚಾಲಯ ಮುಕ್ಕಾಲು ಭಾಗ ಮುಳುಗಡೆಗೊಂಡಿದೆ.ಡ್ರೆಸ್ಸಿಂಗ್ ಕೊಠಡಿಗಳು ಸಂಪೂರ್ಣ ಮುಳುಗಡೆಯಾಗಿದೆ.

ಪರ್ಯಾಯ ಮಾರ್ಗ

ಶಿರಾಡಿ ಘಾಟ್ ಮತ್ತು ಮಡಿಕೇರಿ ರಸ್ತೆಯಲ್ಲಿ ಸಂಚಾರ ನಿಬರ್ಂಧ ವಿಧಿಸಿರುವುದರಿಂದ ಅಥವಾ ನಿಬರ್ಂಧ ವಿಧಿಸುವ ಸಾಧ್ಯತೆ ಇರುವುದರಿಂದ ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ತೆರಳುವ ಬಸ್ ಗಳು ಸದ್ಯ ಚಾರ್ಮಾಡಿ ಘಾಟ್ ಮೂಲಕ ಸಂಚರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿದೆ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…