

ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆಯಾಗಿದ್ದಾರೆ. ಮಹಾಪೋಷಕರಾಗಿ ವರದರಾಜ್ ಎಂ.ಶೆಟ್ಟಿ, ಪೋಷಕರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಮಣೆಗಾರ್ ಮೀರಾನ್ ಸಾಹೇಬ್, ಸ್ಥಾಪಕಾಧ್ಯಕ್ಷ ಸದನ್‌ದಾಸ್ ಮುಖ್ಯ ಸಲಹೆಗಾರರಾಗಿ, ದಿನೇಶ್ ದೇವಾಡಿಗ ಹಾಗೂ ಸುಜಿತ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ, ಸುಧಾಕರ ಪೂಜಾರಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.