ಪಾಠದ ಹೊರತಾದ ವಿಷಯ ಪತ್ರಿಕೆಯಿಂದ ಅರಿವು: ಜಯರಾಮ್ ನಾಯಕ್ ಅಭಿಮತ ವಿದ್ಯಾರ್ಥಿಮಿತ್ರ ಕೊಡುಗೆ ಕಾರ್ಯಕ್ರಮ

mithra
ಆರ್ಬೆಟ್ಟು ವಾಮನ್ ಕಾಮತ್ ಫೌಂಡೇಶನ್ ಸರ್ಕಾರಿ ಪ್ರೌಢಶಾಲೆ ಸಂತೆಕಟ್ಟೆಯಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಪ್ರಾಯೋಜಕತ್ವದ ಕಾರ್ಯಕ್ರಮ
Published on

ಕೊಕ್ಕರ್ಣೆ: ಶಿಕ್ಷಣ ಹಾಗೂ ಆರೋಗ್ಯ ಸಮಸ್ಯೆಗೆ ಮೊದಲ ಆದ್ಯತೆ ಲಯನ್ಸ್ ಬ್ರಹ್ಮಾವರ ಬಾರಕೂರು ಧ್ಯೇಯ. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ವಿದ್ಯಾರ್ಥಿಮಿತ್ರದ ಕೊಡುಗೆ ಹಲವು ಶಾಲೆಗಳಿಗೆ ನೀಡುತ್ತಿದೆ. ಪತ್ರಿಕೆಗಳನ್ನು ಓದುವುದರಿಂದ ಪಾಠದ ಹೊರತು ವಿಷಯ ತಿಳಿಯುತ್ತದೆ ಎಂದು ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ನಾಯಕ್ ಹೇಳಿದರು.

ಸಂತೆಕಟ್ಟೆಯ ಆರ್ಬೆಟ್ಟು ವಾಮನ್ ಕಾಮತ್ ಫೌಂಡೇಶನ್ ಸರ್ಕಾರಿ ಪ್ರೌಢಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೈಕ್ಷಣಿಕ ವರ್ಷದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಲಯನ್ಸ್ ವತಿಯಿಂದ ಗೌರವಿಸಲಾಗುವುದು. ವಿದ್ಯಾರ್ಥಿಮಿತ್ರದಲ್ಲಿ ಹಲವು ವಿಷಯ ಒಳಗೊಂಡಿರುವುದರಿಂದ ಅಂಕಗಳಿಸುವಿಕೆ ಮಾತ್ರವಲ್ಲದೆ, ಉದ್ಯೋಗ, ನೇಮಕಾತಿ ಮುಂತಾದ ವಿಚಾರಕ್ಕೂ ಪೂರಕ. ಶಿಕ್ಷಕರ ಮುಖೇನ ಕಲಿಯುವುದಲ್ಲದೇ ಪೇಪರ್ ಸಹಾಯ ಪಡೆದು ಅಧಿಕ ಅಂಕ ಗಳಿಸಬಹುದು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಹಿಂದೆ ಈ ಪತ್ರಿಕೆ ಪ್ರಯೋಜನ ಪಡೆದು ಅಧಿಕ ಅಂಕ ಗಳಿಸಿರುವುದನ್ನು ಕಾಣಬಹುದು ಹಾಗೂ ಮುಂದಿನ ದಿನಗಳಲ್ಲಿ ಶೇ.100 ಫಲಿತಾಂಶ ದೊರೆಯಲಿ ಎಂದರು.
ಕ್ಲಬ್ ಕಾರ್ಯದರ್ಶಿ ಐವಾನ್ ದೊನತ್ ಸುವಾರಿಸ್, ಜತೆ ಕಾರ್ಯದರ್ಶಿ ಶೇಖರ್ ಶೆಟ್ಟಿ, ಮುಖ್ಯಶಿಕ್ಷಕಿ ಕವಿತಾ, ಶಿಕ್ಷಕ ವೃಂದ, ಪರ್ತಕರ್ತ ಅನಂತ ನಾಯಕ್ ಮುದ್ದೂರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಓದುವ ಹವ್ಯಾಸದಿಂದ ಜ್ಞಾನ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಶಾಲಾ ಪಠ್ಯದೊಂದಿಗೆ ದಿನಪತ್ರಿಕೆ, ಶೈಕ್ಷಣಿಕ ಸಲಕರಣೆಗಳ ಪತ್ರಿಕೆ, ಮಹಾತ್ಮರ ಕೃತಿ, ಕಾವ್ಯಗಳನ್ನು ಓದುವುದರಿಂದ ಅಭಿವೃದ್ಧಿಯಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗುತ್ತಾರೆ.ಐವಾನ್ ದೊನತ್ ಸುವಾರಿಸ್ ಕ್ಲಬ್ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net