ಸುಬ್ರಹ್ಮಣ್ಯ-ಐನಕಿದು ಸಹಕಾರಿ ಮಹಾಸಭೆ

Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಐನಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಸಂಘದ ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಅಧ್ಯಕ್ಷತೆ ವಹಿಸಿದ್ದರು. 2023-2024ನೇ ಸಾಲಿನಲ್ಲಿ ಸಂಘ 111.28 ಕೋಟಿ ರೂ.ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ 32.31ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಕೆ.ಎಸ್. ಮಂಡಿಸಿದರು.

ವರದಿ ಸಾಲಿನಲ್ಲಿ 18.87 ಕೋಟಿ ರೂ. ಸಾಲ ವಿತರಿಸಿ, 18.02 ಕೋಟಿ ರೂ.ಸಾಲ ವಸೂಲಿ ಮಾಡಲಾಗಿದೆ. ವರ್ಷದ ಕೊನೆಯಲ್ಲಿ 18.66 ಕೋಟಿ ರೂ.ಸಾಲ ಇರುತ್ತದೆ. ಶೇ.93.71 ಸಾಲ ವಸೂಲಿಯಾಗಿದೆ.

ಉಪಾಧ್ಯಕ್ಷ ಮಾಧವ ಡಿ., ನಿರ್ದೇಶಕರುಗಳಾದ ಸೋಮಸುಂದರ ಕೆ., ರವೀಂದ್ರ ಕುಮಾರ್ ರುದ್ರಪಾದ, ಮೋಹನದಾಸ ರೈ, ಸುರೇಶ ಕೋಟೆಬೈಲು, ದಾಮೋದರ ಕೆ., ಕಿರಣ ಪೈಲಾಜೆ, ಸುಬ್ರಹ್ಮಣ್ಯ ರಾವ್ ಎ.ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ.ಎಸ್.ಉಪಸ್ಥಿತರಿದ್ದರು. ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಸ್ವಾಗತಿಸಿ ನಿರ್ದೇಶಕರಾದ ರವೀಂದ್ರ ಕುಮಾರ ರುದ್ರಪಾದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net