ಫಿಲಿಪ್ಪೀನ್ಸ್ ಗೃಹ ಬಂಧನದಲ್ಲಿ ವಿದ್ಯಾರ್ಥಿಗಳು

filepains mar 20
Published on

ಚಾಮರಾಜನಗರ/ದಾವಣಗೆರೆ: ಫಿಲಿಪ್ಪೀನ್ಸ್​ನಲ್ಲಿರುವ ಕರ್ನಾಟಕದ 12 ವೈದ್ಯಕೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರಲು ಸಾಧ್ಯವಾಗದೇ ಪರದಾಡುವಂತಾಗಿದೆ. ಮೆಡಿಸಿನ್ ತರಬೇತಿಗಾಗಿ 3 ತಿಂಗಳ ಹಿಂದೆ ಫಿಲಿಪ್ಪೀನ್ಸ್​ಗೆ ತೆರಳಿದ್ದ ಕೊಳ್ಳೇಗಾಲದ ರಶ್ಮಿ, ಬೆಂಗಳೂರಿನ ಸಹನಾ, ಹರಿಹರ ತಾಲೂಕು ನಿಟ್ಟೂರು ಗ್ರಾಮದ ಪ್ರತೀಕ್ ಆರ್. ಬಿದರಿ ಮತ್ತಿತರರು ಈಗ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಜಾಲತಾಣದ ಮೂಲಕ ಅಳಲನ್ನು ತೋಡಿಕೊಂಡಿದ್ದಾರೆ.

ಫಿಲಿಪ್ಪೀನ್ಸ್​ನಲ್ಲಿ 180ಕ್ಕೂ ಅಧಿಕ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಮನೆಗಳಿಂದ ಯಾರೂ ಹೊರಗೆ ಬಾರದಂತೆ ಅಲ್ಲಿನ ಸರ್ಕಾರ ವಿಪತ್ತು ಘೋಷಣೆ ಹೊರಡಿಸಿದೆ. ಇದು 6 ತಿಂಗಳವರೆವಿಗೂ ಮುಂದುವರಿಯಬಹುದು ಎಂದು ತಿಳಿಸಿದೆ. ಇಲ್ಲಿನ ಸರ್ಕಾರ ವಿದೇಶಿಗರು ತಮ್ಮ ದೇಶಕ್ಕೆ ಹಿಂದಿರುಗುವಂತೆ 72 ಗಂಟೆ ಗಡುವು ನೀಡಿತ್ತು, ನಾವು ನಮ್ಮ ದೇಶಕ್ಕೆ ಬರಲು ಸಿದ್ಧತೆ ಮಾಡಿಕೊಂಡು ವಿಮಾನ ಟಿಕೆಟ್​ಬುಕ್ ಮಾಡಿದ್ದೆವು. ಆದರೆ, ಭಾರತ ಸರ್ಕಾರ ವಿಮಾನ ಹಾರಾಟಕ್ಕೆ ಗಡುವು ನಿಗದಿಗೊಳಿಸಿ, ನಿರ್ಬಂಧ ಹೇರಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮೂಲಕ ತಿಳಿಸಿ, ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಭಾರತದ ನಾನಾ ಭಾಗಗಳ ವಿದ್ಯಾರ್ಥಿಗಳು, ಜನರು ಫಿಲಿಪ್ಪೀನ್ಸ್​ನಲ್ಲಿ ಇದ್ದು, ಭಾರತಕ್ಕೆ ಮರಳಲು ಟಿಕೆಟ್​ಬುಕ್ ಮಾಡಿಕೊಂಡಿದ್ದರು. ಆದರೆ, ವಾಪಸಾಗಲು ಸಾಧ್ಯವಾಗುತ್ತಿಲ್ಲ ಎಂದು ಗಾಬರಿಗೊಳಗಾಗಿದ್ದಾರೆ.

ನಮ್ಮನ್ನು ಇಲ್ಲಿ ಮನೆಯಲ್ಲೇ ಕೂಡಿ ಹಾಕಿದ್ದು, ಜೈಲಿನಲ್ಲಿರು ವಂತಾಗಿದೆ. ದಯವಿಟ್ಟು ಮರಳಿ ನಮ್ಮ ದೇಶಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net