

ಕಾನ್ಪುರ: ವಾರ್ಷಿಕ ಕ್ರೀಡಾಕೂಟದಲ್ಲಿ ಎರಡು ಕಬ್ಬಡ್ಡಿ ತಂಡಗಳ ಆಟಗಾರರ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಗಳು ಚೇರಿನಲ್ಲಿ ಬಡಿದಾಡಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರದಲ್ಲಿ ಶನಿವಾರ (ಅ.10) ಸಂಭವಿಸಿದೆ.
ಹಿಂಸಾತ್ಮಕ ಗಲಾಟೆಗೆ ಪ್ರಮುಖ ಕಾರಣವೇನು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿಲ್ಲ. ಘಟನೆಯಲ್ಲಿ ಎರಡು ತಂಡಗಳ ವಿದ್ಯಾರ್ಥಿಗಳ ನಡುವೆ ಜಟಾಪಟಿ ಆರಂಭವಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಚೇರುಗಳನ್ನು ಬೀಸಿ ಬಡಿದಾಡಿಕೊಂಡಿದ್ದಾರೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವರದಿಯ ಪ್ರಕಾರ, ಎರಡೂ ತಂಡಗಳು ಕಾನ್ಪುರದ ಹೊರಗಿನವರು ಎಂದು ಹೇಳಲಾಗಿದ್ದು, ಪ್ರಸ್ತುತ ಎರಡೂ ತಂಡಗಳು ಸ್ಪರ್ಧೆಯಿಂದ ಅನರ್ಹಗೊಂಡಿವೆ. ಈ ಘಟನೆಯ ಬಗ್ಗೆ ಐಐಟಿ ಕಾನ್ಪುರ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).