

ಶಂಕರನಾರಾಯಣ: ವಿದ್ಯಾರ್ಥಿಗಳ ಉತ್ತಮ ಸಾಧನೆ ಕಾಲೇಜಿಗೆ ಹಿರಿಮೆ, ಗೌರವ ತರುತ್ತದೆ. ಸಾಧನೆಯ ಹಿಂದಿನ ಪರಿಶ್ರಮ ಪ್ರಯತ್ನಗಳು ಅನನ್ಯ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಅಕ್ಷತಾ, ಸ್ನೇಹದಾಸ್, ಪ್ರತೀಕ್ಷಾ ಪಿ.ಶೆಟ್ಟಿ, ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್ ಉತ್ತೀರ್ಣರಾದ ರಶ್ಮಿತಾ, ಕೊಡುಗೆ ನೀಡಿದ ಜಯಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಗೈನಾಡಿ, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ಶಂಕರ ಭಟ್ ಕೊಂಡಳ್ಳಿ, ಪ್ರಮುಖರಾದ ದರ್ಶನ್, ಶಶಾಂಕ, ರಕ್ಷಿತಾ ಜೋಗಿ, ಸುಲೋಚನಾ, ಗೌರೀಶ್, ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಸ್ವಾಗತಿಸಿದರು. ಅಮೃತಾ ಮತ್ತು ತಂಡ ಪ್ರಾರ್ಥಿಸಿದರು. ಡಾ.ವಸಂತ ಜಿ.ವರದಿ ವಾಚಿಸಿದರು. ಕ್ಷೇಮಪಾಲನಾಧಿಕಾರಿ ಡಾ.ಗಿರೀಶ್ ಶಾನುಭಾಗ್ ವಂದಿಸಿದರು. ರೇಖಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.