ಗಂಗೊಳ್ಳಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ

gan-12
Published on

ಗಂಗೊಳ್ಳಿ: ಕೆಥೋಲಿಕ್ ಸಭಾ ಗಂಗೊಳ್ಳಿ ಘಟಕದ ಆಶ್ರಯದಲ್ಲಿ ಚರ್ಚ್ ಆರೋಗ್ಯ ಆಯೋಗ, ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಸಹಯೋಗದೊಂದಿಗೆ ಕುಂದಾಪುರ ಬಯೋಲೈನ್ ಲ್ಯಾಬೋರೇಟರಿ ಸಹಕಾರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಗಂಗೊಳ್ಳಿ ಕೊಸೆಸಾಂವ್ ಮಾತೆ ದೇವಾಲಯದ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಭಾನುವಾರ ಜರುಗಿತು.

ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಗಂಗೊಳ್ಳಿ ಅಧ್ಯಕ್ಷ ಎಡ್ವರ್ಡ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಥಾಮಸ್ ರೋಶನ್ ಡಿಸೋಜ, ಗ್ಲೋರಿಯಾ ಫರ್ನಾಂಡಿಸ್, ವಿಜಯ್ ಖಾರ್ವಿ, ಅಬ್ದುಲ್ ರಶೀದ್, ಸೋಮನಾಥ್, ಗುರುರಾಜ್ ಗೋತ್ವಾಲ್, ಆಲ್ವಿನ್ ಕ್ವಾಡ್ರಸ್, ಎಲ್ರೊಯ್ ಕಿರಣ್ ಕ್ರಾಸ್ತಾ, ಹೆರಿಕ್ ಗೊನ್ಸಾಲ್ವಿಸ್, ಮೈಕಲ್ ಪಿಂಟೊ ಉಪಸ್ಥಿತರಿದ್ದರು. ಎಡ್ವರ್ಡ್ ಫನಾರ್ಂಡಿಸ್ ಸ್ವಾಗತಿಸಿದರು. ವಿಲ್ಸನ್ ಡಯಾಸ್ ವಂದಿಸಿದರು. ಓವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net